News in Whatsapp
Eye-Blink

ಪುರುಷರಿಗಿಂತ ಮಹಿಳೆಯರು ಹೆಚ್ಚು ಬಾರಿ ರೆಪ್ಪೆ ಬಡಿಯುವರೇ?

ಕಣ್ಣಿನ ರೆಪ್ಪೆಗಳು ನಮ್ಮ ಕಣ್ಣಿಗೆ ಕಿರಿಕಿರಿಯಾಗದಂತೆ ರಕ್ಷಿಸುತ್ತವೆ. ಮೇಲೆ ಮತ್ತು ಕೆಳಗಿನ ಕಣ್ಣು ರೆಪ್ಪೆಗಳು ಕಣ್ಣಿನೊಳಗೆ ಧೂಳು ಮತ್ತಿತರೆ ವಸ್ತುಗಳು ಕಣ್ಣಿಗೆ ಸೇರದಂತೆ ರಕ್ಷಣಾ ರೇಖೆಯಾಗಿ ಕೆಲಸ ಮಾಡುತ್ತವೆ.

ಸಾಮಾನ್ಯವಾಗಿ ಮನುಷ್ಯರು ಒಂದು ನಿಮಿಷಕ್ಕೆ ಸರಾಸರಿ 15 ಬಾರಿ ತಮ್ಮ ಕಣ್ಣುಗಳನ್ನು ಮಿಟುಕಿಸುತ್ತಾರಂತೆ. ಅಂದರೆ ನಾಲ್ಕು ಸೆಕೆಂಟಿಗೆ ಒಂದು ಬಾರಿ ಕಣ್ಣು ರೆಪ್ಪೆ ಮುಚ್ಚುತ್ತಾರೆ. ಮಹಿಳೆಯರು ಪುರುಷರಿಗೆ ದುಪ್ಪಟ್ಟು ಬಾರಿ ಕಣ್ಣು ಮಿಟುಕಿಸುತ್ತಾರೆ ಎಂದು ಕೆಲವರು ನಂಬುತ್ತಾರೆ. ಆದರೆ ಇದು ನಂಬುವಂತದ್ದಲ್ಲ.

ಮಹಿಳೆಯರು ಮತ್ತು ಪರುಷರು ಸಾಮಾನ್ಯವಾಗಿ ಒಂದೇ ಸಂಖ್ಯೆಯಲ್ಲಿ ಕಣ್ಣುಗಳನ್ನು ಮಿಟುಕಿಸುತ್ತಾರೆ. ಆದರೆ ಸಂಶೋಧನೆಯೊಂದು ಹೇಳುವಂತೆ ಗರ್ಭ ನಿರೋಧಕ ಮಾತ್ರಗಳನ್ನು ತೆಗೆದುಕೊಳ್ಳುವ ಮಹಿಳೆಯರು ಇತರರಿಗಿಂತ ಶೇ.32 ರಷ್ಟು ಹೆಚ್ಚು ಬಾರಿ ರೆಪ್ಪೆ ಬಡಿಯುತ್ತಾರಂತೆ.

ಇನ್ನು ಸ್ಥಳೀಯ ಸುದ್ದಿಗಳಿಗೆ ಹೆಚ್ಚು ಮಹತ್ವ ನೀಡಲಿದೆ ಫೇಸ್ಬುಕ್

ಯಾರು ಹೆಚ್ಚು ಬಾರಿ ರೆಪ್ಪೆ ಬಡಿಯುತ್ತಾರೆ ಎಂಬುದನ್ನು ತಿಳಿಯಲು ಸಂಶೋಧಕರು ಮುಂದಾದರು. ಇದಕ್ಕಾಗಿ ಅವರು 59 ಪುರುಷರು ಮತ್ತು 86 ಮಹಿಳೆಯರನ್ನು ತಮ್ಮ ಸಂಶೋಧನೆಗೆ ಆಯ್ಕೆ ಮಾಡಿಕೊಂಡರು. 86 ಮಹಿಳೆಯರಲ್ಲಿ 44 ಜನ ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದವರು.

5 ನಿಮಿಷಗಳ ಕಾಲ ಅವರ ಕಣ್ಣುಗಳನ್ನು ಪರಿಶೀಲಿಸಿದ ನಂತರ ತಿಳಿದು ಬಂದಿದ್ದೇನೆಂದರೆ, ಒಂದು ನಿಮಿಷಕ್ಕೆ ಪುರುಷರು 14.5 ಬಾರಿ ಮಿಟುಕಿಸಿದರೆ, ಮಹಿಳೆಯರು ಹೆಚ್ಚು ಕಡಿಮೆ ಅಷ್ಟೇ ಬಾರಿ ಅಂದರೆ 14.9 ಬಾರಿ ಕಣ್ಣು ರೆಪ್ಪೆ ಮುಚ್ಚಿದ್ದರು.

Birth-Control-Pill

ಆದರೆ ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುತ್ತಿದ್ದ ಮಹಿಳೆಯರಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಿದ ಮಹಿಳೆಯರು ನಿಮಿಷಕ್ಕೆ 19.6 ಬಾರಿ ಕಣ್ಣು ರೆಪ್ಪೆ ಮುಚ್ಚುತ್ತಿದ್ದರು ಎಂದು ತಿಳಿದು ಬಂದಿದೆ. ಈ ಮಾತ್ರೆ ಸೇವನೆಯಿಂದ ಮೆದುಳಿನ ನಿಯಂತ್ರಣ ಕೇಂದ್ರದ ಮೇಲೆ ಪ್ರಭಾವ ಬೀರಬಹುದು ಎಂದು ಕೆಲವರು ಹೇಳುತ್ತಾರೆ. ಗರ್ಭ ನಿರೋಧಕ ಮಾತ್ರೆಗಳ ಸೇವನೆ ಹೇಗೆ ಇದರ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆ ಸರಿಯಾದ ಉತ್ತರವಿಲ್ಲ.

ಮಕ್ಕಳ ವಿಷಯಕ್ಕೆ ಬಂದರೆ?

Baby

ದೊಡ್ಡವರಿಗೆ ಹೋಲಿಸಿದರೆ ಶಿಶುಗಳು ಅತಿ ಕಡಿಮೆ ಸಂಖ್ಯೆಯಲ್ಲಿ ರೆಪ್ಪೆ ಬಡಿಯುತ್ತಾರೆ. ಸಾಮಾನ್ಯವಾಗಿ ನಿಮಿಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ರೆಪ್ಪೆ ಬಡಿಯುತ್ತಾರೆ. ತಮ್ಮ ಕಣ್ಣುಗಳಿಗೆ ಹೆಚ್ಚು ಕೆಲಸ ಕೊಡುತ್ತಾರೆಯೇ ಹೊರತು ರೆಪ್ಪೆ ಬಡಿಯುವುದು ಕಡಿಮೆ. ಈ ಕುರಿತು ಒಂದು ಅಧ್ಯಯನ ಹೇಳುವುದೇನೆಂದರೆ, ಮಕ್ಕಳು ಹೆಚ್ಚು ಹೆಚ್ಚು ನಿದ್ದೆ ಮಾಡುವುದರಿಂದ ಹೆಚ್ಚು ರೆಪ್ಪೆ ಬಡಿಯುವುದಿಲ್ಲ. ಇನ್ನು ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ರೆಪ್ಪೆ ಬಡಿಯುವ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತದೆಯಂತೆ.

Nervous-person

ಇನ್ನು ಸ್ವಲ್ಪ ಹೆದರಿಕೆ ಸ್ವಭಾವವುಳ್ಳವರು ಹೆಚ್ಚು ಬಾರಿ ರೆಪ್ಪೆ ಬಡಿಯುತ್ತಾರೆ. ಇದು ಅವರ ಹೆದರಿಕೆಯ ಭಾವನೆಯನ್ನು ಸೂಚಿಸುತ್ತದೆ. ನಾವು ಮಾಡುವ ಕೆಲಸ ಮತ್ತು ಕೆಲಸ ವಾಸಿಸುವ ವಾತಾವರಣಗಳ ಮೇಲೆ ನಾವು ರೆಪ್ಪೆ ಬಡಿಯುವ ವಿಷಯದಲ್ಲಿ ಪ್ರಭಾವ ಬೀರುತ್ತವೆ.

Get Latest updates on WhatsApp. Send ‘Subscribe’ to 8550851559