6 ದಿನಗಳಲ್ಲಿ ಅನ್ಲೈನ್ ಜಾಹೀರಾತಿಗೆ ಆಪ್ ಸರ್ಕಾರ ವೆಚ್ಚ ಮಾಡಿದ್ದೆಷ್ಟು?

***

ರಾಜಕಾರಣದಲ್ಲಿ ಬದಲಾವಣೆ ತರ್ತೀವಿ ಎಂದು ಅಧಿಕಾರಕ್ಕೆ ಬಂದ ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರ, ತಾವು ಇತರರಿಗಿಂತ ಹೇಗೆ ಭಿನ್ನ ಎಂದು ಸಾರ್ವಜನಿಕರ ತೆರಿಗೆ ಹಣವನ್ನು ಹೀಗೆ ಪೋಲು ಮಾಡುವ ಮೂಲಕ ತೋರಿಸಿಕೊಡುತ್ತಿದೆ.

ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿ ಪಡೆದ ಮಾಹಿತಿಯಲ್ಲಿ ಕೆಲ ವಿಷಯಗಳು ಬಹಿರಂಗವಾಗಿವೆ. ಕೇವಲ ಆರು ದಿನಗಳಲ್ಲಿ ಆನ್ಲೈನ್ ನಲ್ಲಿ ನೀಡಿದ ಜಾಹಿರಾತಿಗಾಗಿ ಆಪ್ ಸರ್ಕಾರ ವೆಚ್ಚ ಮಾಡಿದ್ದು ಬರೋಬ್ಬರಿ ರೂ. 1,58,75,000/- ತೆರಿಗೆದಾರರ ಹಣ.

ಪ್ರಚಾರಕ್ಕಾಗಿ ಆರು ದಿನಗಳಲ್ಲಿ ವೆಚ್ಚ ಮಾಡಿದ ವಿವರಗಳು ಇಂತಿವೆ ನೋಡಿ.
₹60,00,000 ಫೇಸ್ಬುಕ್ ಜಾಹೀರಾತು
₹25,00,000 ಯೂಟ್ಯೂಬ್ ಜಾಹೀರಾತು
₹20,00,000 ಗೂಗಲ್ ಡಿಸ್‌ಪ್ಲೇ ಆಡ್ಸ್
₹20,00,000 ಫೆಸ್ಬುಕ್ ಜಾಹೀರಾತಿಗಾಗಿ ಪ್ಯಾನ್ ಇಂಡಿಯಾಗೆ ನೀಡಿರುವುದು.

ಫೇಸ್ಬುಕ್ ಜಾಹೀರಾತುಗಳನ್ನು ದೆಹಲಿ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಗುಜರಾತ್ (ದೆಹಲಿ ಹೊರತು ಪಡಿಸಿ ಉಳಿದ ಕಡೆ ಚುನಾವಣೆ ಸಮೀಪಿಸುತ್ತಿದೆ).

ಇದಕ್ಕೆ ಸಂಬಂಧಿಸಿದ ಆರ್.ಟಿ.ಐ ಪ್ರತಿ…