News in Whatsapp

ಎಂಬಾಮಿಂಗ್ ಎಂದರೇನು, ಇದನ್ನು ಮಾಡುವ ಉದ್ದೇಶವೇನು ಗೊತ್ತೇ?

ಈಜಿಪ್ಟ್ ನಲ್ಲಿ ಮೃತಪಟ್ಟವರಿಗೆ ಕೆಲ ರಾಸಾಯನಿಕಗಳನ್ನು ಹಚ್ಚಿ ಒಂದು ರೀತಿಯ ಬಟ್ಟೆಯಲ್ಲಿ ಸುತ್ತಿಡುತ್ತಾರೆ. ಅ ಮೃತದೇಹಗಳು ಕೆಲ ನೂರು ವರ್ಷಗಳವರೆಗೂ ಸಜೀವವಾಗಿಯೇ ಕಾಣಿಸುತ್ತವೆ ಎಂಬುದನ್ನು ನಾವು ಓದಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಆತ್ಮೀಯರು ದೂರದ ದೇಶಗಳಲ್ಲಿ ಸಾವನ್ನಪ್ಪಿದರೆ ಅವರ ಮೃತದೇಹಗಳು ಕೆಡದಂತೆ ಎಚ್ಚರಿಕೆ ವಹಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇದನ್ನೇ ಎಂಬಾಮಿಂಗ್(Embalming) ಎನ್ನುತ್ತಾರೆ.

ಎಂಬಾಮಿಂಗ್ ಎಂದರೇನು? ಏಕೆ ಮಾಡುತ್ತಾರೆ? ಇದರಲ್ಲಿ ಬಳಸುವ ರಾಸಾಯನಿಕಗಳು ಯಾವುವು? ಎಂಬಾಮಿಂಗ್ ಮುಗಿದ ನಂತರ ಎಷ್ಟು ಕಾಲ ದೇಹವನ್ನು ರಕ್ಷಿಸಿಕೊಳ್ಳಬಹುದು ಎಂಬುದು ವಿವರವಾಗಿ ತಿಳಿಯೋಣ.

ಸುಂದರವಾಗಿ ಕಾಣುವಂತೆ ಅಲಂಕರಿಸುವುದು, ಆಕರ್ಷಕವಾಗಿ ಕಾಣಲು ಮಾಡುವ ಪ್ರಕ್ರಿಯೆಯನ್ನೇ ಎಂಬಾಮಿಂಗ್ ಎನ್ನುತ್ತಾರೆ.

ಕೆಲ ಸಂದರ್ಭಗಳಲ್ಲಿ ಮೃತದೇಹವನ್ನು ಹಲವು ದಿನಗಳ ಕಾಲ ಅಂತ್ಯ ಸಂಸ್ಕಾರ ನಡೆಸದೆ ಹಾಗೇ ಇಡಬೇಕಾದ ಪರಿಸ್ಥಿತಿಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ದೇಹ ಕೊಳೆಯದಂತೆ ಇರಲು ಎಂಬಾಮಿಂಗ್ ಮಾಡುತ್ತಾರೆ.

ಈ ಎಂಬಾಮಿಂಗ್ ಪ್ರಕ್ರಿಯೆಯಲ್ಲಿ ಕೆಲ ರಾಸಾಯನಿಕಗಳನ್ನು ದೇಹದೊಳಗೆ ಏರಿಸಲಾಗುತ್ತದೆ. ಇದನ್ನೇ ಎಂಬಾಮಿಂಗ್ ಫ್ಲುಯಿಡ್ಸ್ ಎನ್ನುತ್ತಾರೆ. ಫಾರ್ಮಾಲ್ಡಿಹೈಡ್, ಮೆಥನಾಲ್, ಇಥನಾಲ್ ಜೊತೆಗೆ ಇನ್ನೂ ಕೆಲ ರಾಸಾಯನಿಕಗಳನ್ನು ಎಂಬಾಮಿಂಗ್ ಪ್ರಕ್ರಿಯೆಯಲ್ಲಿ ಬಳಸುತ್ತಾರೆ.

ಈ ಪ್ರಕ್ರಿಯೆಯಲ್ಲಿ ಸತ್ತವರ ಫೋಟೋ ಆಧಾರದ ಮೇಲೆ ಮೃತದೇಹಕ್ಕೆ ಸಾಧ್ಯವಾದಷ್ಟು ಹಿಂದಿನ ರೂಪವನ್ನು ತರಲು ಯತ್ನಿಸುತ್ತಾರೆ. ಕೆನ್ನೆಗಳು ಇಳಿಬಿದ್ದಿದ್ದರೆ ಮೇಣವನ್ನು ಹಚ್ಚಿ ಉಬ್ಬಿದಂತೆ ಮಾಡಲಾಗುತ್ತದೆ. ಹಲವು ದಿನಗಳ ಕಾಲ ಅಸ್ವಸ್ಥರಾಗಿದ್ದವರಿಗೆ ಕಣ್ಣು ಗುಡ್ಡೆಗಳು ಕಿತ್ತು ಬಂದಂತೆ ಕಾಣುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ಲಾಸ್ಟಿಕ್ ಕಣ್ಣುಗುಡ್ಡೆಗಳನ್ನು ಸಹವಾಗಿ ಕಾಣುವಂತೆ ಅಳವಡಿಸುತ್ತಾರೆ. ದೇಹದ ಸುಕ್ಕುಗಳನ್ನು ತೆಗೆಯುತ್ತಾರೆ.

ಈ ಪ್ರಕ್ರಿಯೆ ಮುಗಿದ ನಂತರ ಮೃತದೇಹಕ್ಕೆ ಸಜೀವ ರೂಪ ಬರುತ್ತದೆ. ಇದನ್ನೇ ಫೇಸ್ ಲಿಫ್ಟಿಂಗ್ ಎನ್ನುತ್ತಾರೆ. ಅಮೆರಿಕಾದಲ್ಲಿ ಈ ಪದ್ದತಿಯನ್ನು ಅಳವಡಿಸಿಕೊಳ್ಳುವುದರಲ್ಲಿ ತುಂಬಾ ಮುಂದಿದ್ದಾರೆ. ಎಂಬಾಮಿಂಗ್ ಫ್ಲುಯಿಡ್ಸ್ ಏರಿಸುವುದರಿಂದ ಬ್ಯಾಕ್ಟೀರಿಯಾ, ಸೂಕ್ಷ್ಮ ಜೀವಿಗಳು ಸಾಯುತ್ತವೆ. ಅಂದರೆ ಈ ಫ್ಲುಯಿಡ್ಸ್ ಯಾವ ರೀತಿಯಲ್ಲೂ ಬ್ಯಾಕ್ಟೀರಿಯಾಗೆ ನ್ಯೂಟ್ರಿಯಂಟ್ ಫ್ಲುಯಿಡ್ ನಂತೆ ಕೆಲಸ ಮಾಡುವುದಿಲ್ಲ.

ಈ ಹಿಂದೆ ಸತ್ಯ ಸಾಯಿಬಾಬಾ ಅವರಿಗೂ ಎಂಬಾಮಿಂಗ್ ಮಾಡುವಾಗ ಇದೇ ಪದ್ದತಿಯನ್ನು ಅನುಸರಿಸಲಾಗಿತ್ತು. ಅಮೆರಿಕಾದಲ್ಲಿ ಪ್ರತಿವರ್ಷ 2 ಕೋಟಿ ಟನ್ ನಷ್ಟು ಎಂಬಾಮಿಂಗ್ ಕೆಮಿಕಲ್ಸ್ ಬಳಕೆ ಮಾಡುತ್ತಾರೆ ಎನ್ನಲಾಗಿದೆ.