ಗೋರಖ್ ಪುರ ಮಕ್ಕಳ ಸಾವಿನ ಪ್ರಕರಣ: ಹೀರೋನಂತೆ ಪ್ರಚಾರ ಗಿಟ್ಟಿಸಿದ್ದ ವೈದ್ಯನ ಬಂಧನ

ಉತ್ತರ ಪ್ರದೇಶದಲ್ಲಿ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 60 ಮಕ್ಕಳ ಜೀವ ತೆಗೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬರನ್ನು ಬಂಧಿಸಿದ್ದಾರೆ. ಘಟನೆಯ ಪ್ರಮುಖ ಸೂತ್ರಧಾರೆಂದು ಅನುಮಾನಿಸಲಾಗುತ್ತಿರುವ ವೈದ್ಯ ಡಾ. ಕಫೀಲ್ ಖಾನ್ ಅವರನ್ನು ಸ್ಪೆಷಲ್ ಟಾಸ್ಕ್ ಫೋರ್ಸ್ ಪಡೆ ವಶಕ್ಕೆ ಪಡೆದಿದೆ. ಸಿಲಿಂಡರ್ ಕೊರತೆಗೆ ವೈದ್ಯ ಕಫೀಲ್ ಖಾನ್ ಅವರೇ ಪ್ರಮುಖ ಕಾರಣ ಎಂಬ ಆರೋಪಗಳಿವೆ.

ಮೆದುಳು ವ್ಯಾಧಿ ವಿಭಾಗಕ್ಕೆ ನೋಡಲ್ ಅಧಿಕಾರಿಯಾಗಿರುವ ಕಫೀಲ್ ಖಾನ್, ದಂತ ವೈದ್ಯೆಯಾದ ತನ್ನ ಪತ್ನಿಯೊಂದಿಗೆ ಸೇರಿ ಖಾಸಗಿ ಆಸ್ಪತ್ರೆಯೊಂದನ್ನು ನಡೆಸುತ್ತಿದ್ದಾರೆ. ತನ್ನ ಆಸ್ಪತ್ರೆಗಾಗಿ ಬಿ.ಆರ್.ಡಿ ಆಸ್ಪತ್ರೆಯಿಂದಲೇ ಸಿಲಿಂಡರ್ ಗಳನ್ನು ಸಾಗಿಸಿದ್ದಾರೆ. ಇದರಿಂದಾಗಿ ಸಿಲಿಂಡರ್ ಕೊರತೆ ಉಂಟಾಗಿ ಮಕ್ಕಳ ಸಾವು ಸಂಭವಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಕಫೀಲ್ ಖಾನ್ ಗೆ ಕಾಲೇಜು ಪ್ರಾಂಶುಪಾಲರಾದ ಡಾ. ಆರ್.ಕೆ.ಮಿಶ್ರಾ ರವರೂ ಸಹಕರಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

[ಇದನ್ನೂ ಓದಿ:ಗೋರಖ್ಪುರ ದುರಂತ: ಆ ಹೀರೋ ಡಾಕ್ಟರ್ ಮಾಡಿದ್ದೆಲ್ಲಾ ಪ್ರಚಾರಕ್ಕಾಗಿ?]

ತಮ್ಮದೇ ಖರ್ಚಿನಲ್ಲಿ ಮಕ್ಕಳಿಗಾಗಿ ಸಿಲಿಂಡರ್ ಖರೀದಿಸಿದ್ದಾಗಿ ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿ ಹೀರೋ ಆಗಿದ್ದರು ಈ ಕಫೀಲ್ ಖಾನ್. ಆದರೆ ಸತ್ಯ ಬೆಳಕಿಗೆ ಬಂದ ನಂತರ ಸೇವೆಯಿಂದ ಅಮಾನತಾಗಿ ಈಗ ಜೈಲು ಪಾಲಾಗಿದ್ದಾರೆ.