ಜಯಾ ಸಾವಿನ ಕುರಿತು ಸಂದೇಹ ವ್ಯಕ್ತಪಡಿಸಿದ ವೈದ್ಯೆಯ ಬಂಧನ |News Mirchi

ಜಯಾ ಸಾವಿನ ಕುರಿತು ಸಂದೇಹ ವ್ಯಕ್ತಪಡಿಸಿದ ವೈದ್ಯೆಯ ಬಂಧನ

ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜಯಲಲಿತ ಸಾವಿನ ಕುರಿತು ತನಗೆ ಅನೇಕ ಸಂದೇಹಗಳಿವೆ ಎಂದು ಆರೋಪಿಸಿದ ಮಹಿಳಾ ವೈದ್ಯೆಯನ್ನು ಚೆನ್ನೈ ಸೈಬರ್ ಕ್ರೈಮ್ ಪೊಲೀಸರ್ ಬಂಧಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 22 ರಂದು ಜಯಲಲಿತಾ ರವರನ್ನು ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ತಾನು ಅಪೋಲೋ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದೆ, ಆಸ್ಪತ್ರೆಗೆ ದಾಖಲಾದಾಗ ಜಯಲಲಿತಾ ರವರಿಗೆ ಅಸಲಿಗೆ ನಾಡಿಮಿಡಿತ ಇರಲಿಲ್ಲ, ಇತರೆ ವೈದ್ಯರಿಗೆ ಜಯಾ ಬಳಿ ಬಿಡುತ್ತಿರಲಿಲ್ಲ ಎಂದು ನ್ಯೂಟ್ರೀಷನಿಷ್ಟ್ ರಾಮಸೀತ ಮಾಡಿದ ಆರೋಪಗಳು ಮತ್ತೊಮ್ಮೆ ಜಯಾ ಸಾವಿನ ಕುರಿತು ಅನುಮಾನಗಳಿಗೆ ಕಾರಣವಾಗಿದೆ. ಜಯಲಲಿತಾ ಸಾವಿತ ಕುರಿತು ರಾಮಸೀತ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಚೆನ್ನೈನ ಅಪೋಲೋ ಮ್ಯಾನೇಜ್ ಮೆಂಟ್ ಪೊಲೀಸರಿಗೆ ದೂರು ನೀಡಿತ್ತು. ಅಪೋಲೋ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಶನಿವಾರವೇ ಆ ವೈದ್ಯೆಯನ್ನು ಬಂಧಿಸಿದ್ದಾರೆ.

ಜಯಲಲಿತಾ ಸಾವಿನ ನಂತರ ಜಯಾ ಸೋದರ ಸೊಸೆ ದೀಪಾ ಬೆಂಬಲಿಗರು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ್ದ ರಾಮಸೀತ, ಜಯಾ ಸಾವಿನ ಕುರಿತು ಹಲವು ಸಂಚಲನ ಹೇಳಿಕೆ ನೀಡಿದ್ದರು. ಆ ವೀಡಿಯೋ ಅಲ್ಪ ಅವಧಿಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತು. ಹೀಗಾಗಿ ಅದೇ ವೀಡಿಯೋ ಆಧಾರದ ಮೇಲೆ ಚೆನ್ನೈನ ಅಪೊಲೋ ಆಸ್ಪತ್ರೆ ಆಡಳಿತ ವರ್ಗ ಆಕೆಯ ವಿರುದ್ಧ ಕೇಸು ದಾಖಲಿಸುವಂತೆ ಚೆನ್ನೈ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿತ್ತು.

Loading...
loading...
error: Content is protected !!