ಗೋರಖ್’ಪುರ ದುರಂತ: ಆ ಹೀರೋ ಡಾಕ್ಟರ್ ಮಾಡಿದ್ದೆಲ್ಲಾ ಪ್ರಚಾರಕ್ಕಾಗಿ? – News Mirchi

ಗೋರಖ್’ಪುರ ದುರಂತ: ಆ ಹೀರೋ ಡಾಕ್ಟರ್ ಮಾಡಿದ್ದೆಲ್ಲಾ ಪ್ರಚಾರಕ್ಕಾಗಿ?

ಮಕ್ಕಳ ಜೀವ ಉಳಿಸಲು ತಮ್ಮ ಸ್ವಂತ ಹಣ ಖರ್ಚು ಮಾಡಿ ಆಮ್ಲಜನಕ ಸಿಲಿಂಡರ್ ತರಿಸಿದ್ದಾಗಿ ಸಾಮಾಜಿಕ ತಾಣಗಳಲ್ಲಿ ಪ್ರಚಾರವಾಗಿ ಹೀರೋ ಎನಿಸಿಕೊಂಡ ಡಾಕ್ಟರ್ ಅಮಾನತುಗೊಂಡಿದ್ದಾರೆ. ಉತ್ತರ ಪ್ರದೇಶದ ಗೋರಖ್ ಪುರದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ ಮೆದುಳು ಉರಿಯೂತ ವ್ಯಾಧಿ ವಿಭಾಗದ ನೋಡಲ್ ಅಧಿಕಾರಿಯಾಗಿರುವ ಕಫೀಲ್ ಅಹಮದ್ ಖಾನ್ ಅಮಾನತುಗೊಂಡವರು. ಕರ್ತವ್ಯವನ್ನು ನಿರ್ಲಕ್ಷಿಸಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಇವರು ಸ್ವಂತ ಹಣದಿಂದ ಹೊರಗಿನಿಂದ ಆಮ್ಲಜನಕ ಸಿಲಿಂಡರ್ ಖರೀದಿಸಿದ್ದಾಗಿ ಮಾಧ್ಯಮಗಳಿಗೆ ಫೋಸ್ ನೀಡಿದ್ದಾರೆ ಎಂಬುದು ಅವರ ಮೇಲಿನ ಆರೋಪ.

ಇತ್ತೀಚೆಗೆ ಮೆದುಳು ಉರಿಯೂತ ವ್ಯಾಧಿಯಿಂದಾಗಿ ಹಲವಾರು ಮಕ್ಕಳು ಈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದಕ್ಕೆ ಆಮ್ಲಜನಕ ಸರಬರಾಜು ಕೊರತೆಯೇ ಕಾರಣವೆಂದು ಹೇಳಲಾಗುತ್ತಿತ್ತು. ಮಕ್ಕಳ ಸಾವು ದೇಶಾದ್ಯಂತ ಸುದ್ದಿಯಾಗುತ್ತಿದ್ದ ನಡುವೆಯೇ ಸ್ವಂತ ಹಣದಿಂದ ಆಮ್ಲಜನಕ ಸಿಲಿಂಡರ್ ಹೊರಗಿನಿಂದ ಖರೀದಿಸಿ ಮಕ್ಕಳ ಜೀವ ಕಾಪಾಡಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಕಫೀಲ್ ಖಾನ್ ಕುರಿತು ವರದಿಯಾದವು.

ಆದರೆ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್ ಗಳ ಕೊರತೆಗೆ ಕಫೀಲ್ ಖಾನ್ ಮತ್ತು ಕಾಲೇಜು ಪ್ರಾಂಶುಪಾಲರಾದ ಆರ್.ಕೆ.ಮಿಶ್ರಾ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದ ಸತ್ಯ. ಕಫೀಲ್ ಖಾನ್ ಗೋರಖ್ ಪುರದಲ್ಲಿ 50 ಹಾಸಿಗೆಗಳ ಖಾಸಗಿ ಆಸ್ಪತ್ರೆಯನ್ನೂ ನಡೆಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಬಹಿರಂಗಪಡಿಸಿವೆ. ಆಸ್ಪತ್ರೆಯ ಖರೀದಿ ಸಮಿತಿಯ ಸದಸ್ಯರೂ ಆಗಿರುವ ಕಫೀಲ್ ಖಾನ್ ರವರಿಗೆ ಆಸ್ಪತ್ರೆಗೆ ಸಂಬಂಧಿಸಿದ ಪ್ರತಿಯೊಂದು ಖರೀದಿ, ಬಾಕಿಗಳ ಬಗ್ಗೆ ಮಾಹಿತಿ ಇರುತ್ತದೆ.

ಈಗಾಗಲೇ ಮಿಶ್ರಾ ಅವರು ಅಮಾನತುಗೊಂಡಿದ್ದರಿಂದ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಸೃಷ್ಟಿಸಿ ಪ್ರಚಾರ ಗಿಟ್ಟಿಸಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಫೀಲ್ ಖಾನ್ ವಿರುದ್ಧ ಅಮಾನತು ಶಿಕ್ಷೆ ಜಾರಿಯಾಗಿದೆ.

Contact for any Electrical Works across Bengaluru

Loading...
error: Content is protected !!