ಮಾಲೀಕಳ ಜೀವ ಉಳಿಸಲು ಹೋಗಿ ಬಲಿಯಾದ ನಾಯಿ |News Mirchi

ಮಾಲೀಕಳ ಜೀವ ಉಳಿಸಲು ಹೋಗಿ ಬಲಿಯಾದ ನಾಯಿ

ಮಾಲೀಕಳ ಪ್ರಾಣ ಉಳಿಸಲು ಹೋಗಿ ಸಾಕು ನಾಯಿಯೊಂದು ಬಲಿಯಾದ ಘಟನೆ ಮುಂಬಯಿಯಲ್ಲಿ ನಡೆದಿದೆ. ವೆಂಕಟೇಶ್ ಎಂಬಾತ ತನ್ನ ಪ್ರೇಯಸಿಯನ್ನು ಕೊಲ್ಲಲು ಪ್ರಯತ್ನಿಸಿದಾಗ, ಆಕೆ ಜೀವ ಉಳಿಸಿಕೊಳ್ಳಲು ತನ್ನ ಗೆಳತಿಯ ಮನೆಗೆ ಓಡಿದ್ದಾಳೆ. ಅಲ್ಲಿಗೂ ಬಂದ ಆ ವೆಂಕಟೇಶ್ ಪ್ರೇಯಸಿಯ ಗೆಳತಿ ಸುಮತಿಯ ಮೇಲೂ ಚೂರಿಯಿಂದ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಇದನ್ನು ಕಂಡ ಸುಮತಿಯ ಸಾಕುನಾಯಿ “ಲಕ್ಕೀ” ತನ್ನ ಮಾಲೀಕಳ ಜೀವ ರಕ್ಷಣೆಗೆ ಮುಂದಾಗಿ ಹಲ್ಲೆ ಮಾಡಲು ಬಂದ ವ್ಯಕ್ತಿಯನ್ನು ಎರಡು ಬಾರಿ ಕಚ್ಚಿದೆ. ಇದರಿಂದ ಕುಪಿತಗೊಂಡ ವೆಂಕಟೇಶ್ ನಾಯಿಯನ್ನು ಚೂರಿಯಿಂದ ಕೊಂದು ಅಲ್ಲಿಂದ ಪರಾರಿಯಾಗಿದ್ದಾನೆ.

ಆರೋಪಿ ತನ್ನ ಪ್ರೇಯಸಿಯೊಂದಿಗೆ ಭಿನ್ನಾಪ್ರಾಯ ಹೊಂದಿದ್ದ. ಹೀಗಾಗಿ ಆಕೆಯನ್ನು ಆತ ಕೊಲ್ಲಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.

Loading...
loading...
error: Content is protected !!