ಭಾರತ ಜಾಗತಿಕ ಶಕ್ತಿಯಾಗಿರುವುದರಿಂದಲೇ ಡೊಕ್ಲಾಮ್ ಬಿಕಟ್ಟು ಅಂತ್ಯ – News Mirchi

ಭಾರತ ಜಾಗತಿಕ ಶಕ್ತಿಯಾಗಿರುವುದರಿಂದಲೇ ಡೊಕ್ಲಾಮ್ ಬಿಕಟ್ಟು ಅಂತ್ಯ

ಭಾರತವು ಜಾಗತಿಕವಾಗಿ ಶಕ್ತಿಶಾಲಿ ರಾಷ್ಟ್ರವಾಗಿರುವುದರಿಂದಲೇ ಚೀನಾದೊಂದಿಗಿನ ಡೊಕ್ಲಾಮ್ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಯಿತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಒಂದು ವೇಳೆ ಭಾರತ ದುರ್ಬಲವಾಗಿದ್ದಿದ್ದರೆ ಡೊಕ್ಲಾಮ್ ಬಿಕ್ಕಟ್ಟು ಇಂದಿನವರೆಗೂ ಬಗೆಹರಿಯುತ್ತಿರಲಿಲ್ಲ ಎಂದು ಹೇಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವಕರ್ಮ ಮಹಾಸಭಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಪ್ರಕಾಶ್ ಜಾವಡೇಕರ್, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮುಂತಾದವರು ಭಾಗವಹಿಸಿದ್ದರು.

[ಇದನ್ನೂ ಓದಿ: ಬಿ.ಎಸ್.ವೈ ಮತ್ತು ಅನಂತ್ ಕುಮಾರ್ ವಿರುದ್ಧ ಎಫ್.ಐ.ಆರ್.]

ಭಾರತ ಮತ್ತು ಚೀನಾದ ಸೇನಾ ಪಡೆಗಳು ಡೊಕ್ಲಾಮ್ ನಲ್ಲಿ ಸುಮಾರು ಎರಡು ತಿಂಗಳುಗಳ ಕಾಲ ನಿಯೋಜನೆಗೊಂಡಿದ್ದವು. ಇದರಿಂದಾಗಿ ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ಕಂಡುಬಂದಿತ್ತು. ಆದರೆ ನಂತರ ಮಾತುಕತೆಯ ಮೂಲಕ ಈ ಬಿಕ್ಕಟ್ಟು ಇತ್ಯರ್ಥವಾಗಿತ್ತು. ಉಭಯ ದೇಶಗಳ ಸೈನಿಕರು ಅಲ್ಲಿಂದ ಹಿಂದೆ ಸರಿದಿದ್ದರು.

Get Latest updates on WhatsApp. Send ‘Add Me’ to 8550851559

Contact for any Electrical Works across Bengaluru

Loading...
error: Content is protected !!