ಮೋದಿಗೆ ಫೋನ್ ಮಾಡಿದ ಟ್ರಂಪ್, ಬಿಜೆಪಿ ಗೆಲುವಿಗೆ ಅಭಿನಂದನೆ |News Mirchi

ಮೋದಿಗೆ ಫೋನ್ ಮಾಡಿದ ಟ್ರಂಪ್, ಬಿಜೆಪಿ ಗೆಲುವಿಗೆ ಅಭಿನಂದನೆ

ನವದೆಹಲಿ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಟ್ರಂಪ್, ಮೋದಿಯವರಿಗೆ ಶುಭಾಶಯ ಹೇಳಿದರೆಂದು ವೈಟ್ ಹೌಸ್ ಪ್ರೆಸ್ ಸೆಕ್ರಟರಿ ಸೀನ್ ಸ್ಪೈಸರ್ ಸೋಮವಾರ ಹೇಳಿದ್ದಾರೆ. ಆದರೆ ಇತ್ತೀಚೆಗೆ ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿ ವಿಷಯ ಚರ್ಚೆ ನಡೆಯಿತಾ ಎಂಬ ಬಗ್ಗೆ ಮಾಹಿತಿ ಇಲ್ಲ.

ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ಕೆಲ ಗಂಟೆಗಳಲ್ಲೇ ಮೊದಲ ಬಾರಿಗೆ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಟ್ರಂಪ್ ಮಾತನಾಡಿದ್ದರು. ನಂತರ ಎರಡು ಮೂರು ಬಾರಿ ವಿವಿಧ ವಿಷಯಗಳ ಕುರಿತು ಮೋದಿಯವರಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ ಇದೇ ಮೊದಲ ಬಾರಿಗೆ ಭಾರತದ ಆಂತರಿಕ ರಾಜಕೀಯಕ್ಕೆ ಸಂಬಂಧಿಸಿದಂತೆ ಟ್ರಂಪ್ ಮಾತನಾಡಿರುವುದು ವಿಶೇಷ.

Loading...
loading...
error: Content is protected !!