ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಿಸಿದ ಟ್ರಂಪ್ |News Mirchi

ವೈಟ್ ಹೌಸ್ ನಲ್ಲಿ ದೀಪಾವಳಿ ಆಚರಿಸಿದ ಟ್ರಂಪ್

ಶ್ವೇತಭವನದ ಓವಲ್ ಆಫೀಸ್ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ-ಅಮೆರಿಕನ್ ಆಡಳಿತದ ಸದಸ್ಯರೊಂದಿಗೆ ಸೇರಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದರು. ಭಾರತೀಯರೊಂದಿಗೆ ಸೇರಿ ದೀಪಗಳನ್ನು ಬೆಳಗಿದ ನಂತರ ಕೆಲ ಹೊತ್ತು ಅಧಿಕಾರಿಗಳೊಂದಿಗೆ ಹರಟೆ ಹೊಡೆದರು. ಈ ಸಂಭ್ರಮಾಚರಣೆಯಲ್ಲಿ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹೇಲೆ, ಸೆಂಟರ್ ಫಾರ್ ಮೆಡಿಕೇರ್ ಅಡ್ಮಿನಿಸ್ಟ್ರೇಟರ್ ಸೀಮಾ ವರ್ಮಾ, ಯುಎಸ್ ಫೆಡರಲ್ ಕಮ್ಯೂನಿಕೇಷನ್ಸ್ ಕಮೀಷನ್ ಚೇರ್ಮನ್ ಅಜಿತ್ ಪಾಯ್ ಮುಂತಾದ ಭಾರತೀಯ ಅಮೆರಿಕನ್ನರು ಪಾಲ್ಗೊಂಡಿದ್ದರು.

[ಇದನ್ನೂ ಓದಿ: ತಾಜ್ ಮಹಲ್ ವಿವಾದ, ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಪ್ರಧಾನಿ]

ಈ ಸಂದರ್ಭದಲ್ಲಿ ಸೆರೆ ಹಿಡಿದ ವೀಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದಾರೆ. ಭಾರತೀಯ ಅಮೆರಿಕನ್ನರ ಸಮುದಾಯದೊಂದಿಗೆ ಸೇರಿ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದು ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಅವರು ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ನಿರ್ಮಿಸಿದ ಹೆಮ್ಮೆಯ ಪ್ರಜೆಗಳು ಭಾರತೀಯರು. ಆ ದೇಶದ ಪ್ರಧಾನಿ ಮೋದಿಯವರೊಂದಿಗೆ ಇರುವ ಬಲವಾದ ಸಂಬಂಧಗಳಿಗೆ ನಾನು ಸಂತೋಷಗೊಂಡಿದ್ದೇನೆ. ನಮ್ಮ ಭಾರತೀಯ-ಅಮೆರಿಕನ್ ಸಹೋದರರು ಮತ್ತು ಸ್ನೇಹಿತರು ಅಮೇರಿಕದ ಅಭಿವೃದ್ಧಿಗೆ ಶ್ರಮವಹಿಸುತ್ತಿದ್ದಾರೆ. ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯರಿಗೆ ಧನ್ಯವಾದಗಳು. ಪೀಪಲ್ಸ್ ಹೌಸ್ ನಲ್ಲಿ ದೀಪಾವಳಿ ಆಚರಿಸುತ್ತಿರುವುದು ಸಂತೋಷವಾಗಿದೆ. ಅಮೆರಿಕದಲ್ಲಿರುವ ಪ್ರತಿಯೊಬ್ಬರಿಗೂ, ಹಿಂದೂಗಳಿಗೆ ದೀಪಾವಳಿ ಶುಭಾಶಯಗಳು, ನಿಮ್ಮ ಡೊನಾಲ್ಡ್ ಟ್ರಂಪ್ ಎಂದು ಬರೆದಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...
loading...
error: Content is protected !!