Donald-Trump

ಭಾರತದ ಆಮದು ತೆರಿಗೆಗೆ ಟ್ರಂಪ್ ಅಸಮಾಧಾನ

ಅಮೆರಿಕದಿಂದ ಭಾರತಕ್ಕೆ ಆಮದಾಗುತ್ತಿರುವ ಹಾರ್ಲೇ ಡೇವಿಡ್ ಸನ್ ಬೈಕ್ ಗಳಿಗೆ ಭಾರತವು ಆಮದು ಸುಂಕ ವಿಧಿಸುತ್ತಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಿಂದ ಅಮೆರಿಕ್ಕೆ ರಫ್ತಾಗುವ ಬೈಕ್ ಗಳ ಮೇಲೆ ನಾವು ಯಾವುದೇ ತೆರಿಗೆ ವಿಧಿಸುತ್ತಿಲ್ಲ ಎಂದಿರುವ ಟ್ರಂಪ್, ಇದೀಗ ಭಾರತ ವಿಧಿಸುತ್ತಿರುವ ಹೊಸ ತೆರಿಗೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ವಿಷಯದಲ್ಲಿ ನಾನು ನಿರ್ದಿಷ್ಟವಾಗಿ ಭಾರತವನ್ನು ದೂಷಿಸುತ್ತಿಲ್ಲ, ಆದರೆ ಈ ರೀತಿಯ ತೆರಿಗೆ ವಿಧಾನ ಸರಿಯಲ್ಲ. ಹಲವು ದೇಶಗಳು ನಮ್ಮನ್ನು ಬಳಸಿಕೊಳ್ಳುತ್ತಿವೆ. ನಮ್ಮ ಉತ್ಪನ್ನಗಳಿಗೆ ಬೃಹತ್ ಪ್ರಮಾಣದ ತೆರಿಗೆ ವಿಧಿಸುತ್ತಾರೆ, ಆದರೆ ಅವರು ಇಲ್ಲಿ ಮಾರೋ ಉತ್ಪನ್ನಗಳಿಗೆ ನಾವು ಯಾವುದೇ ತೆರಿಗೆ ವಿಧಿಸುತ್ತಿಲ್ಲ. ನಾವು ಒಂದು ರೀತಿ ಮೂರ್ಖರಂತಾಗಿದ್ದೇವೆ, ಇನ್ನೂ ಹಾಗೆಯೇ ಮುಂದುವರೆಯಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಮಹಾಶಿವರಾತ್ರಿ ಪ್ರಸಾದ ತಿಂದು 1500ಕ್ಕೂ ಹೆಚ್ಚು ಜನ ಅಸ್ವಸ್ಥ

ಇತರೆ ದೇಶಗಳು ವಿಧಿಸುವ ಆಮದು ತೆರಿಗೆಗೆ ಪ್ರತಿಯಾಗಿ ಅಮೆರಿಕವೂ ಪರಸ್ಪರ ತೆರಿಗೆಯನ್ನು ವಿಧಿಸಬೇಕು. ಅಮೆರಿಕವೂ ಪರಸ್ಪರ ತೆರಿಗೆ ವಿಧಿಸಿದಾಗ ಮಾತ್ರ ಅದು ನ್ಯಾಯಯುತ ವಹಿವಾಟಾಗುತ್ತದೆ ಎಂದು ತಿಳಿಸಿದರು. ಹೀಗಾದಾಗ ನಾವು ಏನು ಅವರ ವಸ್ತುಗಳಿಗೆ ಏನು ತೆರಿಗೆ ವಿಧಿಸುತ್ತೇವೆಯೋ ಅವರೂ ನಮ್ಮಿಂದ ಅಷ್ಟೇ ತೆರಿಗೆ ವಸೂಲಿ ಮಾಡುತ್ತಾರೆ, ಅಥವಾ ಎರಡೂ ಕಡೆಯಿಂದ ಯಾವುದೇ ಸುಂಕವನ್ನು ವಿಧಿಸುವುದಿಲ್ಲ ಎಂದು ಹೇಳಿದರು.

ಈ ಸಂಪ್ರದಾಯವನ್ನು ಬದಲಿಸಿದಾಗಲೇ ಇದು ನ್ಯಾಯಯುತ ವಹಿವಾಟು ಎಂದು ಕರೆಸಿಕೊಳ್ಳುತ್ತದೆ. ಪರಸ್ಪರ ತೆರಿಗೆ ವಿಧಿಸಿದಾಗ ಇತರೆ ದೇಶಗಳು ನಮ್ಮ ಉತ್ಪನ್ನಗಳಿಗೆ ಆಮದು ಸುಂಕವನ್ನು ರದ್ದುಮಾಡದಿದ್ದರೂ, ನಾವು ವಿಧಿಸುವ ತೆರಿಗೆಗೆ ಸಮನಾಗಿಯಾದರೂ ಇಳಿಸುವ ಸಾಧ್ಯತೆಗಳಿರುತ್ತವೆ ಎಂದರು.

Get Latest updates on WhatsApp. Send ‘Subscribe’ to 8550851559