ಮೋದಿ ಭೇಟಿ ನಿರೀಕ್ಷೆಯಲ್ಲಿ ಟ್ರಂಪ್ – News Mirchi

ಮೋದಿ ಭೇಟಿ ನಿರೀಕ್ಷೆಯಲ್ಲಿ ಟ್ರಂಪ್

ವಾಷಿಂಗ್ಟನ್: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷದಲ್ಲಿ ಕೈಗೊಳ್ಳಲಿರುವ ಅಮೆರಿಕಾ ಪ್ರವಾಸಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತದಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಕಂಡಿದ್ದನ್ನು ಅಭಿನಂದಿಸಲು ಮೋದಿಯವರಿಗೆ ಟ್ರಂಪ್ ದೂರವಾಣಿ ಕರೆ ಮಾಡಿದ್ದ ವೇಳೆ ಈ ಪ್ರಸ್ತಾಪ ಮಾಡಿದ್ದಾರೆ.

ಈ ಸಂಬಂಧ ವೈಟ್ ಹೌಸ್ ಮೂಲಗಳು ಮಂಗಳವಾರ ವಿವರಗಳನ್ನು ಪ್ರಕಟಿಸಿವೆ. ಆದರೆ ಮೋದಿಯವರ ಪ್ರವಾಸ ಯಾವಾಗ ಎಂಬುದನ್ನು ಮಾತ್ರ ತಿಳಿಸಲಿಲ್ಲ. “ಭಾರತದ ಪ್ರಧಾನಿಯವರ ಆರ್ಥಿಕ ಸುಧಾರಣಾ ಕ್ರಮಗಳಿಗೆ ಟ್ರಂಪ್ ಬೆಂಬಲ ವ್ಯಕ್ತಪಡಿಸಿದರು. ಭಾರತದ ಬಗ್ಗೆ ತಮಗೆ ಅಪಾರ ಗೌರವವಿದ್ದು, ಮೋದಿಯವರಿಗೆ ಆತಿಥ್ಯ ನೀಡಲು ಮೋದಿಯವರ ಅಮೆರಿಕಾ ಪ್ರವಾಸವನ್ನು ನಿರೀಕ್ಷಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ” ಎಂದು ಅಧಿಕೃತ ಪ್ರಕಟಣೆ ಹೇಳಿದೆ.

Loading...

Leave a Reply

Your email address will not be published.