ಮೋದಿ ಬಿಟ್ಟು ಟ್ರಂಪ್ ವರ್ಷದ ವ್ಯಕ್ತಿ ಆಯ್ಕೆ, ಭಾರತೀಯರಿಗೆ ನಿರಾಸೆ

ಟೈಮ್ಸ್ ಮ್ಯಾಗಜಿನ್ ನಡೆಸಿದ ವಿಶ್ವದ ಅತ್ಯಂತ ಪ್ರಭಾವಿ ನಾಯಕರಲ್ಲಿ ಅತ್ಯಧಿಕ ಓಟು ಗಳಿಸಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬಿಟ್ಟು ಅಮೆರಿಕ ಮುಂದಿನ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ರವರನ್ನು ವರ್ಷದ ವ್ಯಕ್ತಿ ಎಂದಿ ಟೈಮ್ಸ್ ಮ್ಯಾಗಜಿನ್ ಆಯ್ಕೆ ಮಾಡಿದೆ.

ಟೈಮ್ಸ್ ಮ್ಯಾಗಜಿನ್ ನಡೆಸಿದ ಈ ಸಮೀಕ್ಷೆಯಲ್ಲಿ ಮೋದಿಯವರು ಅತ್ಯಧಿಕ ಎಂದರೆ ಶೇ‌18 ರಷ್ಟು ಮತ ಗಳಿಸಿ ಪ್ರಥಮ ಸ್ಥಾನದಲ್ಲಿ ನಿಂತರು. ಪರ್ಸನ್ ಆಫ್ ದ ಇಯರ್ ಅವಾರ್ಡ್ ಗೆದ್ದ ಡೊನಾಲ್ಡ್ ಟ್ರಂಪ್ ಕೇವಲ ಶೇ.7 ಮತಗಳನ್ನಷ್ಟೇ ಪಡೆದರು. ಅದರೂ ಹೆಚ್ಚು ಓಟು ಪಡೆದ ಮೋದಿಯನ್ನು ಪಕ್ಕಕ್ಕೆ ಸರಿಸಿ ಡೊನಾಲ್ಡ್ ಟ್ರಂಪ್ ರವರನ್ನು ಅಯ್ಕೆ ಮಾಡಿದ್ದಾರೆ. ಕಳೆದ ಬಾರಿಯೂ ಹೀಗೇ ಆಗಿತ್ತು.

ಕಳೆದ ವರ್ಷ ಟೈಮ್ಸ್ ಮ್ಯಾಗಜಿನ್ ನಡೆಸಿದ ಈ ಆನ್ಲೈನ್ ಸಮೀಕ್ಷೆಯಲ್ಲಿ ನರೇಂದ್ರ ಮೋದಿಯವರಿಗೆ ಶೇ.21 ರಷ್ಟು ಮತ ಬಂದಿತ್ತು. ಆಗಲೂ ಜರ್ಮನಿಯ ಏಂಜಿಲಾ ಮಾರ್ಕೆಲ್ ರವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಈ ಬಾರಿಯೂ ಮೋದಿ ಹಾಗೂ ಟ್ರಂಪ್ ನಡುವಿನ ಮತಗಳಲ್ಲಿ ಶೇ.11 ರಷ್ಟು ವ್ಯತ್ಯಾಸವಿದ್ದರೂ ಟ್ರಂಪ್ ಈ ಅವಾರ್ಡ್ ಗೆ ಆಯ್ಕೆಯಾದರು. ಈ ಬಾರಿ ಮೋದಿಯವರೇ ಆಯ್ಕೆಯಾಗುತ್ತಾರೆ ಎಂದು ಭಾವಿಸಿದ್ದ ಭಾರತೀಯರಿಗೆ ಈ ಬಾರಿಯೂ ನಿರಾಸೆಯೇ.

Related News

Loading...

Leave a Reply

Your email address will not be published.

error: Content is protected !!