ಚೀನಾ ವರ್ತನೆಗೆ ಟ್ರಂಪ್ ಆಕ್ರೋಶ, ವಾಣಿಜ್ಯವಾಗಿ ಬುದ್ದಿ ಕಲಿಸುವ ಎಚ್ಚರಿಕೆ

ಲಂಗೂ ಲಗಾಮಿಲ್ಲದೆ ವರ್ತಿಸುತ್ತಿರುವ ಉತ್ತರ ಕೊರಿಯಾದ ಅಣ್ವಸ್ತ್ರಗಳಿಗೆ ತಡೆಯೊಡ್ಡುವ ಪ್ರಯತ್ನಗಳಿಗೆ ಚೀನಾ ಸಹಕರಿಸುತ್ತಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತೀಕಾರವಾಗಿ ಚೀನಾ ಮೇಲೆ ವಾಣಿಜ್ಯಿಕ ಕ್ರಮಗಳನ್ನು ಕೈಗೊಳ್ಳುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಅಧ್ಯಕ್ಷ ಟ್ರಂಪ್ ಬುಧವಾರ ಯೂರೋಪ್ ಪ್ರವಾಸಕ್ಕೆ ತೆರಳಿದರು. ಜರ್ಮನಿಯ ಹಾಂಬರ್ಗ್ ನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯ ಭಾಗವಾಗಿ ಟ್ರಂಪ್ ಚೀನಾ ಅಧ್ಯಕ್ಷ ಜಿನ್ ಪಿಂಗ್ ರವರೊಂದಿಗೆ ಭೇಟಿಯಾಗಲಿದ್ದಾರೆ. ಈ ಭೇಟಿಗೆ ಮುನ್ನವೇ ಅವರು ಚೀನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಉತ್ತರ ಕೊರಿಯಾ ಕೈಗೊಳ್ಳುತ್ತಿರುವ ಅಣ್ವಸ್ತ್ರಗಳು, ಕ್ಷಿಪಣಿ ಪರೀಕ್ಷೆಗಳನ್ನು ಆ ದೇಶದ ಮಿತ್ರ ದೇಶವಾದ ಚೀನಾ ನಿಯಂತ್ರಿಸಬೇಕು, ಹಾಗಾದಾಗ ಅಮೆರಿಕಾ ಚೀನಾದೊಂದಿಗೆ ವಾಣಿಜ್ಯಿಕ ಒಪ್ಪಂದಗಳನ್ನು ಮಾಡಿಕೊಳ್ಳುತ್ತದೆ ಎಂದು ಟ್ರಂಪ್ ಎಚ್ಚರಿಸಿದರು. ಉತ್ತರ ಕೊರಿಯಾ ಇತ್ತೀಚೆಗೆ ಅಮೆರಿಕಾ, ಪಾಶ್ಚಿಮಾತ್ಯ ದೇಶಗಳಿಗೆ ಸವಾಲೆಸೆಯುವ ಖಂಡಾಂತರ ಕ್ಷಿಪಣಿಗಳನ್ನು ಬಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸುವ ಮೂಲಕ ಅಮೆರಿಕವನ್ನು ಆತಂಕಕ್ಕೆ ದೂಡಿದೆ.

ನಿಗದಿಯೇ ಆಗದ ಮೋದಿ ಜಿನ್’ಪಿಂಗ್ ಭೇಟಿ ರದ್ದಾಗುವುದಾದರೂ ಹೇಗೆ?

ಉತ್ತರ ಕೊರಿಯಾ ಚಟುವಟಿಕೆಗಳನ್ನು ನಿಯಂತ್ರಿಸಲು ಚೀನಾ ವಿಫಲವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧ ಕಿಡಿ ಕಾರಿದ್ದಾರೆ. ಈ ಹಿಂದೆಯೂ ಕೆಲವು ಬಾರಿ ಉತ್ತರಕೊರಿಯಾವನ್ನು ನಿಯಂತ್ರಿಸಲು ಚೀನಾ ಏಕೆ ಪ್ರಯತ್ನಿಸುತ್ತಿಲ್ಲ ಎಂದು ಟ್ವೀಟ್ ಮಾಡಿದ್ದರು. ಈಗ ವಾಣಿಜ್ಯವಾಗಿ ಚೀನಾಗೆ ಬುದ್ದಿ ಕಲಿಸಬೇಕೆಂದು ಟ್ರಂಪ್ ನಿರ್ಧರಿಸಿದಂತಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಟ್ರಂಪ್ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ.

ಪ್ರಧಾನಿಯಾಗುವ ಹಂಬಲ ಇಲ್ಲ, ಜವಾಬ್ದಾರಿ ಮುಗಿದ ನಂತರ ಮಠಕ್ಕೆ