ಭಾರತೀಯರಿಗೆ ಟ್ರಂಪ್ ಕ್ಯಾಂಪ್‌ನಿಂದ ಸಿಹಿ ಸುದ್ದಿ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಅಮೆರಿಕದಿಂದ ಸಿಹಿ ಸುದ್ದಿಯೊಂದು ಬಂದಿದೆ. ಪಾಕಿಸ್ತಾನವನ್ನು ಭಯೋತ್ಪಾದಕ ಪ್ರಾಯೋಜಕ ದೇಶ ಎಂದು ಪ್ರಕಟಿಸಿ ಎಂಬ ಭಾರತೀಯರ ಒತ್ತಾಯ ಶೀಘ್ರದಲ್ಲೇ ನೆರವೇರಲಿದೆ. ಭಾರತೀಯ ಮೂಲದ ಪ್ರಸಿದ್ಧ ಉದ್ಯಮಿ, ಟ್ರಂಪ್ ಸಲಹೆಗಾರರ ಕೌನ್ಸಿಲ್ ನಲ್ಲಿನ ಪ್ರಮುಖ ವ್ಯಕ್ತಿ ಆಗಿರುವ ಶಾಲಬ್ ಕುಮಾರ್ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ಈ ಕುರಿತು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನವನ್ನು ಭಯೋತ್ಪಾದಕ ಪ್ರಾಯೋಜಕ ದೇಶವಾಗಿ ಘೋಷಿಸುವ ಮಸೂದೆಯನ್ನು ಟ್ರಂಪ್ ನೇತೃತ್ವದಲ್ಲಿ ಶೀಘ್ರದಲ್ಲೇ ಅಂಗೀಕರಿಸಲಾಗುವುದು ಎಂದು ಅವರು ಹೇಳಿದರು. ಅಮೆರಿಕನ್ ಕಾಂಗ್ರೆಸ್ ಗೆ ಸೆಪ್ಟೆಂಬರ್ ನಲ್ಲಿ ತಲುಪಿರುವ ಮಸೂದೆಯನ್ನು ಟ್ರಂಪ್ ಅಧಿಕಾರಕ್ಕೇರುತ್ತಿದ್ದಂತೆ ಅನುಮೋದಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್ ನೇತೃತ್ವದಲ್ಲಿ ಭಾರತ ಮತ್ತು ಅಮೆರಿಕಾ ಸಂಬಂಧ ವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಇತಿಹಾಸದಲ್ಲಿ ಎಂದೂ ಕಾಣದಂತೆ ಎರಡು ದೇಶಗಳ ಸಂಬಂಧ ಗಟ್ಟಿಗೊಳ್ಳುತ್ತವೆ ಎಂದು ಅವರು ಆಶಾಭಾವನೆ ವ್ಯಕ್ಯಪಡಿಸಿದರು. ಪಾಕಿಸ್ತಾನವನ್ನು ಭಯೋತ್ಪಾದಕ ಪ್ರಾಯೋಕ ದೇಶ ಎಂದು ಅಮೆರಿಕಾ ಘೋಷಿಸಿದರೆ, ಪಾಕಿಸ್ತಾನಕ್ಕೆ ಹಣಕಾಸು ನೆರವಿನ ಹೊಳೆ ಕಡಿಮೆಯಾಗಿ, ಪಾಕ್ ಆರ್ಥಿಕವಾಗಿ ದುರ್ಬಲಗೊಳ್ಳುವುದು ಖಚಿತ ಎನ್ನಲಾಗುತ್ತಿದೆ.