ಪಾಕ್ ಗೆ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ |News Mirchi

ಪಾಕ್ ಗೆ ಡೊನಾಲ್ಡ್ ಟ್ರಂಪ್ ಗಂಭೀರ ಎಚ್ಚರಿಕೆ

ಭಯೋತ್ಪಾದಕರಿಗೆ ಆಶ್ರಯ ನೀಡಿದರೆ ಸಹಿಸುವ ಮಾತೇ ಇಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಭಯೋತ್ಪಾದಕರಿಗೆ ಸ್ವರ್ಗ ತಾಣವಾದರೆ ನಾವು ನೋಡುತ್ತಾ ಸುಮ್ಮನೆ ಕೂರುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಅಫ್ಘನಿಸ್ತಾನದಲ್ಲಿ ಅಮೆರಿಕಾ ನಡೆಸುತ್ತಿರುವ ಕಾರ್ಯಚರಣೆಯಲ್ಲಿ ಪಾಲುದಾರನಾಗಿ ಪಾಕಿಸ್ತಾನ ತುಂಬಾ ಲಾಭ ಗಳಿಸಿದೆ. ಆದರೆ ಅದು ಅಪರಾಧಿಗಳಿಗೆ ಆಶ್ರಯ ಕಲ್ಪಿಸುವ ಮೂಲಕ ನಷ್ಟಗೊಳ್ಳುತ್ತಿದೆ ಎಂದು ಅವರು ಹೇಳಿದರು. ಭಯೋತ್ಪಾದಕರ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಿದ್ದರೆ ಪಾಕಿಸ್ತಾನವು ಅಮೆರಿಕದಿಂದ ಪಡೆಯುತ್ತಿರುವ ಸೈನಿಕ ಮತ್ತಿತರ ನೆರವುಗಳನ್ನು ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ತ್ರಿವಳಿ ತಲಾಖ್ ಗೆ 6 ತಿಂಗಳು ಸುಪ್ರೀಂ “ತಲಾಖ್”

ಭಯೋತ್ಪಾದನೆ ವಿರುದ್ಧ ಹೋರಾಟಗಳಿಗೆ ಸಹಕರಿಸುವ ಮೂಲಕ ಪಾಕಿಸ್ತಾನಕ್ಕೆ ನಾವು ಬಿಲಿಯನ್ ಡಾಲರ್ ಗಳನ್ನು ನೀಡುತ್ತಿದ್ದರೂ, ನಾವು ಯಾವ ಉಗ್ರರ ವಿರುದ್ಧ ಹೋರಾಡುತ್ತಿದ್ದೇವೋ, ಅವರಿಗೇ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಉಗ್ರರಿಗೆ ನೆರವು ನೀಡುವ ತನ್ನ ವರ್ತನೆಯನ್ನು ಪಾಕ್ ಬದಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಭಾರತದೊಂದಿಗೆ ಸ್ನೇಹ ವೃದ್ಧಿಯೇ ನಮಗೆ ಮುಖ್ಯ

ಆಫ್ಘನಿಸ್ತಾನದಲ್ಲಿ ಸ್ಥಿರತೆ ನೆಲೆಸಲು ಭಾರತ ನೀಡಿದ ಸಹಕಾರ ಮರೆಯಲಾಗದ್ದು ಎಂದು ಟ್ರಂಪ್ ಬಣ್ಣಿಸಿದರು. ಅಮೆರಿಕಾದೊಂದಿಗೆ ವ್ಯಾಪಾರದಲ್ಲಿ ಶತಕೋಟಿ ಡಾಲರ್ ಗಳ ಆದಾಯ ಗಳಿಸುತ್ತಿರುವ ಭಾರತ, ಆಫ್ಘನ್ ವಿಷಯದಲ್ಲಿ ಮುಖ್ಯವಾಗಿ ಆರ್ಥಿಕ ಮತ್ತು ಅಭಿವೃದ್ಧಿ ವಿಷಯದಲ್ಲಿ ಮತ್ತಷ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ನಮಗೆ ರಕ್ಷಣೆ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಪಾಲುದಾರ ಎಂದು ಹೇಳಿದ ಟ್ರಂಪ್, ಭಾರತದೊಂದಿಗೆ ಅಮೆರಿಕಾ ಸಂಬಂಧ ಬಲಗೊಳಿಸುವುದೇ ನಮಗೆ ಮುಖ್ಯ ಎಂದರು.

ಮಹಾರಾಷ್ಟ್ರದಲ್ಲಿ ಕಮಲದ “ವಿಶ್ವಾಸ್ ವಿಕಾಸ್”

Loading...
loading...
error: Content is protected !!