ಹಿಲರಿಗೆ ಶಾಕ್, ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷ

ವಾಷಿಂಗ್ಟನ್: ಸಮೀಕ್ಷೆಗಳೆಲ್ಲಾ ತಲೆಕೆಳಗಾಗಿವೆ. ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸೋಲು ಅನುಭವಿಸಿದ್ದಾರೆ. ಎಲ್ಲರ ಅಂದಾಜುಗಳನ್ನೂ ಸುಳ್ಳು ಮಾಡಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿಜಯಶಾಲಿಯಾಗಿದ್ದಾರೆ. ವಿಶ್ವವೆಲ್ಲಾ ಅಸಕ್ತಿಯಿಂದ ಎದುರು ನೋಡುತ್ತಿದ್ದ ಫಲಿತಾಂಶದಲ್ಲಿ ಕೊನೆಗೆ ಟ್ರಂಪ್ ವಿಜಯಿಯಾಗಿ 45 ನೇ ಅಧ್ಯಕ್ಷರಾಗಿ ಅಯ್ಕೆಯಾದರು. 538 ಮತಗಳಿರುವ ಎಲೆಕ್ಟೊರಲ್ ಕಾಲೇಜಿನಲ್ಲಿ ಟ್ರಂಪ್ ಸ್ಪಷ್ಟ ಬಹುಮತ ಪಡೆದು ಮಾರ್ಕ್ 270 ಸಾಧಿಸಿದರು. ಟ್ರಂಪ್ 276 ಮತ ಪಡೆದರೆ, ಹಿಲರಿ ಕ್ಲಿಂಟನ್ 218 ಮತಗಳಿಂದ ಹಿಂದೆ ಬಿದ್ದರು.

Loading...

Leave a Reply

Your email address will not be published.

error: Content is protected !!