ಟ್ರಂಪ್ ಬಗ್ಗೆ ತಿಳಿಯದ ಕುತೂಹಲದ ವಿಷಯ – News Mirchi

ಟ್ರಂಪ್ ಬಗ್ಗೆ ತಿಳಿಯದ ಕುತೂಹಲದ ವಿಷಯ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ‌ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ ಗೆಲುವು ಸಾಧಿಸಿ ಅಧ್ಯಕ್ಷ ಪೀಠವನ್ನು ಏರಿದವರು ದೊಡ್ಡ ಉದ್ಯಮಿ ಡೊನಾಲ್ಡ್ ಟ್ರಂಪ್. ಅವರ ವೈಯುಕ್ತಿಕ ಜೀವನವನ್ನು ಗಮನಿಸಿದಾಗ, ಟ್ರಂಪ್ ಒಬ್ಬ ಹಠವಾದಿ, ಬೇರೆಯವರಿಗೆ ಇಷ್ಟವಾಗಲಿ ಬಿಡಲಿ, ತನಗನಿಸಿದ್ದು ಮಾಡುತ್ತಾ ಮುಂದೆ ಸಾಗುವ ವ್ಯಕ್ತಿತ್ವ ಆತನದು ಎಂದು ಸ್ಪಷ್ಟವಾಗುತ್ತದೆ. 1946 ಜೂನ್ 14 ರಂದು ನ್ಯೂಯಾರ್ಕ್ ನ ಕ್ವೀನ್ಸ್ ನಲ್ಲಿ ಜನ್ಮಿಸಿದಾಗ ಟ್ರಂಪ್ ಹುಟ್ಟಿನಿಂದಲೇ ಆಗರ್ಭ ಶ್ರೀಮಂತ.

ತಂದೆಯ ವ್ಯಾಪಾರವನ್ನು ಕೈಗೆತ್ತಿಕೊಂಡ ಟ್ರಂಪ್, ವ್ಯಾಪಾರದಲ್ಲಿ ಆಕ್ರಮಣಕಾರಿಯಾಗಿ ವರ್ತಿಸುತ್ತಲೇ ತಮ್ಮ ವೈಯುಕ್ತಿಕ ಅಭಿರುಚಿಗಳ ವಿಷಯದಲ್ಲೂ ರಾಜಿಯಾಗಲಿಲ್ಲ. ಟ್ರಂಪ್‌ಗೆ ನಟನೆಯಲ್ಲಿ ಹೆಚ್ಚು ಆಸಕ್ತಿ. ಇಲ್ಲಿಯವರೆಗೂ ಹಲವು ಚಲನಚಿತ್ರಗಳಲ್ಲಿ, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಎಲ್ಲದರಲ್ಲೂ ಉದ್ಯಮಿಯಾಗಿ, ಶ್ರೀಮಂತ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಅವರು 14 ಟಿವಿ ಕಾರ್ಯಕ್ರಮಗಳು, 12 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ಚಿತ್ರದಲ್ಲಿ ಮಾಂತ್ರಿಕನಾಗಿಯೂ ಟ್ರಂಪ್ ಕಾಣಿಸಿಕೊಂಡಿದ್ದಾರೆ. ಆದರೆ ನಟನೆಯ ಮೂಲಕ ಪ್ರೇಕ್ಷಕರ ಮನ ಗೆಲ್ಲಲು ಟ್ರಂಪ್ ಗೆ ಸಾಧ್ಯವಾಗಿಲ್ಲ.

Click for More Interesting News

Loading...

Leave a Reply

Your email address will not be published.

error: Content is protected !!