3 ಲಕ್ಷ ಅನಿವಾಸಿ ಭಾರತೀಯರನ್ನು ಮನೆಗೆ ಕಳುಹಿಸಲಿರುವ ಟ್ರಂಪ್? – News Mirchi

3 ಲಕ್ಷ ಅನಿವಾಸಿ ಭಾರತೀಯರನ್ನು ಮನೆಗೆ ಕಳುಹಿಸಲಿರುವ ಟ್ರಂಪ್?

ವಿಶ್ವದ ದೇಶಗಳೆಲ್ಲಾ ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಅಮೆರಿಕಾ ಅಧ್ಯಕ್ಷ ಮಾತ್ರ ತಮ್ಮ ಹಠ ಬಿಡುತ್ತಿಲ್ಲ. ಫೆಡರಲ್ ಇಮ್ಮಿಗ್ರೇಷನ್ ಕಾಯ್ದೆಗಳನ್ನು ಟ್ರಂಫ್ ಕಠಿಣಗೊಳಿಸುತ್ತಿರುವುದರಿಂದ ಆ ಪ್ರಭಾವ ಅಮೆರಿಕದಲ್ಲಿರುವ ಒಂದು ಕೋಟಿ ವಿದೇಶೀಯರ ಮೇಲೆ ಬೀಳಲಿದೆ. ಅದರಲ್ಲಿ 3 ಲಕ್ಷ ಭಾರತೀಯರು ಮನೆಗೆ ವಾಪಸಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇತರೆ ದೇಶಗಳಿಂದ ಬಂದು ಅಮೆರಿಕದಲ್ಲಿ ಅಕ್ರಮವಾಗಿ ವಾಸವಿರುವವರಿಗೆ ತಮ್ಮ ಇಲಾಖೆ ಯಾವುದೇ ವಿನಾಯಿತಿ ನೀಡುವುದಿಲ್ಲ, ಅವರನ್ನು ಹೊರಗೆ ಕಳುಹಿಸುವ ಪ್ರಕ್ರಿಯೆ ಮುಂದುವರೆಯುತ್ತದೆ ಎಂದು ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ ಒಂದು ಪ್ರಕಟಣೆ ನೀಡಿದೆ.

ಈ ಕಾಯ್ದೆಯ ಪ್ರಮುಖ ಗುರಿ ಅಪರಾಧಿಗಳನ್ನು ಹೊರಗೋಡಿಸುವುದೇ, ಆದರೆ ಇದರ ಪ್ರಭಾವ ಅಮೆರಿಕಕ್ಕೆ ಹೋಗಿ ಸಣ್ಣ ಸಣ್ಣ ವ್ಯಾಪಾರಗಳು, ಉದ್ಯೋಗಗಳನ್ನು ಮಾಡುತ್ತಿರುವವರ ಮೇಲೆ ಬೀಳಲಿದೆ. ಸುಮಾರು 3 ಲಕ್ಷ ಭಾರತೀಯರು ಸೂಕ್ತ ದಾಖಲೆಗಳಿಲ್ಲದೆ ಅಮೆರಿಕಾದಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇವರಿಗೆಲ್ಲಾ ಸಂಕಷ್ಟ ತಪ್ಪಿದ್ದಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಪ್ರಾಪ್ತರು, ಆಶ್ರಯ ಅರಸಿ ಬಂದವರಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ ಎನ್ನಲಾಗುತ್ತಿದೆ.

Loading...

Leave a Reply

Your email address will not be published.