ಶಿರಡಿಯಲ್ಲಿ ರಕ್ತದಾನ ಮಾಡಿ, 1 ವರ್ಷ ವಿಐಪಿ ದರ್ಶನ ಪಡೆಯಿರಿ

ಮುಂಬೈ: ಪ್ರಸಿದ್ಧ ಶಿರಡಿ ದೇವಾಲಯದಲ್ಲಿ ಸಾಯಿಬಾಬಾ ದರ್ಶನಕ್ಕೆ ಹೋದಾಗಲೆಲ್ಲಾ ಸಾಲಿನಲ್ಲಿ ನಿಂತು ಬೇಸತ್ತಿದ್ದೀರಾ. ಇನ್ನು ಆ ಚಿಂತೆ ಬಿಡಿ, ಇನ್ನು ಮುಂದೆ ಬೇಕೆಂದರೆ ನೀವು ಸಹಾ ವಿಐಪಿ ದರ್ಶನ ಪಡೆಯಬಹುದು. ನೀವು ವಿಐಪಿ ದರ್ಶನ ಪಡೆಯುವ ಅವಕಾಶವನ್ನು ಶಿರಡಿ ಸಾಯಿಬಾಬಾ ಸಂಸ್ಥಾನ್ ಟ್ರಸ್ಟ್ ಕಲ್ಪಿಸುತ್ತಿದೆ. ಆದರೆ ಈ ಅವಕಾಶ ನೀವು ಪಡೆಯಲು ಮಾಡಬೇಕಿರುವುದು ಇಷ್ಟೇ.. ರಕ್ತದಾನ… ಹೌದು ಶಿರಡಿ ಸಾಯಿಬಾಬಾ ದರ್ಶನ ಮಾಡಲು ಹೋದವರು ರಕ್ತದಾನ ಮಾಡುವ ಮೂಲಕ ದೇವಾಲಯದಲ್ಲಿ ಒಂದು ವರ್ಷದ ಕಾಲ ವಿಐಪಿ ಸ್ಥಾನಮಾನದ ದರ್ಶನ ಲಿಭಿಸುವುದರ ಜೊತೆಗೆ, ಅಲ್ಲಿನ ವಸತಿ ಗೃಹಗಳಲ್ಲಿಯೂ ಕೂಡಾ ವಿಐಪಿ ವ್ಯಕ್ತಿಗಳಿಗೆ ನೀಡುವ ಸೌಲಭ್ಯಗಳನ್ನೇ ನೀಡುತ್ತಾರೆ.

ಜನರ ಯೋಗಕ್ಷೇಮಕ್ಕಾಗಿ ಈ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದೇವೆ ಎಂದು ಟ್ರಸ್ಟ್ ಚೇರ್ಮನ್ ಸುರೇಶ್ ಹರೇ ಮಾಧ್ಯಮಗಳಿಗೆ ಹೇಳಿದ್ದಾರೆ. ಶಿರಡಿಯನ್ನು ಬ್ಲಡ್ ಬ್ಯಾಂಕ್ ಕೇಂದ್ರವನ್ನಾಗಿ ಬದಲಾಯಿಸುವುದು ತಮ್ಮ ಉದ್ದೇಶವೆಂದು ಅವರು ಹೇಳಿದ್ದಾರೆ. ತಿರುಮಲ ತಿರುಪತಿಯಲ್ಲಿ ಕೂದಲು ಅರ್ಪಿಸಿದ ಹಾಗೇ, ಶಿರಡಿಯಲ್ಲಿ ರಕ್ತದಾನ ಮಾಡುವುದನ್ನು ಸಂಪ್ರದಾಯವನ್ನಾಗಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.