ತಮಿಳು ಚಿತ್ರದಲ್ಲಿ ಮೂಗುತೂರಿಸಿ ತಮಿಳು ಆತ್ಮಾಭಿಮಾನ ಕೆಣಕದಿರಿ : ರಾಹುಲ್ ಗಾಂಧಿ – News Mirchi

ತಮಿಳು ಚಿತ್ರದಲ್ಲಿ ಮೂಗುತೂರಿಸಿ ತಮಿಳು ಆತ್ಮಾಭಿಮಾನ ಕೆಣಕದಿರಿ : ರಾಹುಲ್ ಗಾಂಧಿ

ನವದೆಹಲಿ,ಅ.22:– ತಮಿಳು ನಟ ವಿಜಯ್ ನಟಿಸಿರುವ “ಮರ್ಸಲ್” ಚಿತ್ರದಲ್ಲಿ ಕೇಂದ್ರ ಸರ್ಕಾರದ ಜಿಎಸ್ ಟಿ ಮತ್ತು ನೋಟು ರದ್ಧತಿ ನಿರ್ಧಾರಗಳನ್ನು ಟೀಕಿಸಿರುವ ಸಂಭಾಷಣೆಗಳನ್ನು ಹೊಂದಿದ್ದು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ.

ಬಿಜೆಪಿ ಈ ಚಿತ್ರದ ಸಂಭಾಷಣೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ರಾಹುಲ್ ಚಿತ್ರದ ಪರವಾಗಿ ಮಾತನಾಡಿದ್ದಾರೆ. ಮರ್ಸಲ್ ಚಿತ್ರದ ವಿಷಯದಲ್ಲಿ ಮೂಗು ತೂರಿಸುವ ಮೂಲಕ ತಮಿಳು ಆತ್ಮಾಭಿಮಾನವನ್ನು ಕೆಣಕಲು ಯತ್ನಿಸದಿರಿ. ತಮಿಳುನಾಡಿನಲ್ಲಿ ಸಿನಿಮಾಗಳು ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಆಳವಾಗಿ ಅಭಿವ್ಯಕ್ತಗೊಳಿಸುತ್ತವೆ ಮೋದಿಯವರೇ ಎಂದು ರಾಹುಲ್ ಹೇಳಿದ್ದಾರೆ.

[ಇದನ್ನೂ ಓದಿ: ವಾಟ್ಸಾಪ್ ನಲ್ಲಿ ಲೈವ್ ಲೊಕೇಷನ್ ಶೇರಿಂಗ್]

ಬಿಜೆಪಿ ಚಿತ್ರವನ್ನು ಟೀಕಿಸಿರುವುದಕ್ಕೆ ರಾಹುಲ್ ಗಾಂಧಿ ಅವರಿಗಿಂತಲೂ ಮುನ್ನ ಹಿರಿಯ ನಾಯಕ ಪಿ.ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದರು. ನಟ ಕಮಲಹಾಸನ್ ಟ್ವಿಟ್ ಮಾಡಿ ಟೀಕಾಕಾರರ ಬಾಯಿ ಮುಚ್ಚಿಸಬೇಡಿ. ಭಾರತ ಯಾವಾಗ ಮಾತನಾಡುತ್ತದೆಯೋ ಅಂದು ಪ್ರಕಾಶಿಸಲಿದೆ ಎಂದು ಮರ್ಸಲ್ ಚಿತ್ರವನ್ನು ಬೆಂಬಲಿಸಿದ್ದಾರೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!