Madhya pradesh High Court

‘ದಲಿತ’ ಪದ ಬಳಸಬೇಡಿ: ರಾಜ್ಯ, ಕೇಂದ್ರಗಳಿಗೆ ಮಧ್ಯಪ್ರದೇಶ ಹೈಕೋರ್ಟ್ ಸೂಚನೆ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಧಿಕೃತ ಸಂವಹನದಲ್ಲಿ ‘ದಲಿತ’ ಪದಗಳನ್ನು ಬಳಸದಂತೆ ಮಧ್ಯಪ್ರದೇಶ ಹೈಕೋರ್ಟ್ ಸೂಚಿಸಿದೆ. ‘ದಲಿತ’ ಪದದ ಬದಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೆಂದು ಬಳಸುವಂತೆ ಸಲಹೆ ನೀಡಿದೆ.

ಸಂವಿಧಾನದಲ್ಲಿ ದಲಿತ ಪದಗಳನ್ನು ಎಲ್ಲೂ ಉಲ್ಲೇಖಿಸಿಲ್ಲ, ಹೀಗಾಗಿ ಈ ‘ದಲಿತ’ ಪದವನ್ನು ಬಳಸದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಡೆಯಬೇಕಿದೆ ಎಂದು ಹೇಳಿದೆ. ಸರ್ಕಾರಿ ಸಂವಹನಗಳಲ್ಲಿ ‘ದಲಿತ’ ಪದ ಬಳಕೆ ನಿಲ್ಲಿಸುವಂತೆ ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಮೊಹಾರ್ ಎಂಬುವವರು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಸಲಹೆ ನೀಡಿದೆ.

ಅಂಬೇಡ್ಕರ್ ಅವರೂ ಒಪ್ಪಿರಲಿಲ್ಲ

ದಲಿತ ಎಂಬ ಪದವು ಮೇಲ್ವರ್ಗದ ಜಾತಿಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಅವಹೇಳನ ಮಾಡಲು ರೂಢಿಗೆ ತರಲಾಗಿದೆ. ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರೂ ದಲಿತ ಎಂಬ ಪದ ಸೂಕ್ತವಲ್ಲ ಎಂದು ಭಾವಿಸಿದ್ದರು ಎಂದು ಅರ್ಜಿಯಲ್ಲಿ ಮೊಹಾರ್ ಹೇಳಿದ್ದಾರೆ.

Get Latest updates on WhatsApp. Send ‘Subscribe’ to 8550851559