ChandraShekar-kambar

ಎರಡು ದಶಕಗಳ ನಂತರ ಕನ್ನಡಿಗನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷಗಿರಿ

ಕೇಂದ್ರ ಸಾಹಿತ್ಯ ಅಕಾಡೆಮಿಯ ನೂತನ ಆಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ. ಇಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಒಡಿಯಾದ ಲೇಖಕಿ ಪ್ರತಿಭಾ ರಾಯ್ ಅವರ ವಿರುದ್ಧ ಕಂಬಾರರು ಗೆಲುವು ಕಂಡರು. ಕಂಬಾರರ ಪರ 59 ಮತಗಳು ಚಲಾವಣೆಯಾದರೆ, ಪ್ರತಿಭಾ ಪರ 29 ಮತಗಳೂ ಚಲಾವಣೆಯಾದವು. ಇನ್ನು ಮಹಾರಾಷ್ಟ್ರದ ಬಾಲಚಂದ್ರ ನೆಮಾಡೆ ಅವರಿಗೆ 4 ಮತಗಳು ಬಿದ್ದವು.

ಟಾಯ್ಲೆಟ್ ಗಾಗಿ ಈ ಮಹಿಳೆ ಮಾಡಿದ್ದೇನು ಗೊತ್ತೇ…?

1983 ರಲ್ಲಿ ಕನ್ನಡಿಗರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೆ.ಗೋಕಾಕ್ ಹಾಗೂ, 1993 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿ ಅವರು ಈ ಹುದ್ದೆಯನ್ನು ನಿಭಾಯಿಸಿದ್ದರು.

Get Latest updates on WhatsApp. Send ‘Subscribe’ to 8550851559