ಅಮರನಾಥ ಯಾತ್ರಿಕರ ಮೇಲಿನ ಉಗ್ರರ ದಾಳಿ ಪ್ರಕರಣ: ಚಾಲಕನೋರ್ವನ ಬಂಧನ – News Mirchi

ಅಮರನಾಥ ಯಾತ್ರಿಕರ ಮೇಲಿನ ಉಗ್ರರ ದಾಳಿ ಪ್ರಕರಣ: ಚಾಲಕನೋರ್ವನ ಬಂಧನ

ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಉಗ್ರರೊಂದಿಗೆ ಸಂಪರ್ಕವಿದೆ ಎಂಬ ಶಂಕೆಯ ಮೇಲೆ ಚಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಮ್ಮೂ ಕಾಶ್ಮೀರ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ತೌಷೀಫ್ ಅಹಮದ್ ಏಳು ತಿಂಗಳಿನಿಂದ ಪಿಡಿಪಿ ಶಾಸಕ ಅಜೀಜ್ ಅಹಮದ್ ಮೀರ್ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಉಗ್ರರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆತನ ಹೆಸರಿರುವುದು ತಿಳಿದು ಆತನ ಮೇಲೆ ತನಿಖೆ ನಡೆಸುತ್ತಿದ್ದೇವೆ ಎಂದು ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ. ಅಮರನಾಥ ಯಾತ್ರಿಕರ ಮೇಲಿನ ದಾಳಿಗೆ ಸಂಬಂಧಿಸಿದಂತೆ ಇನ್ನಿಬ್ಬರನ್ನೂ ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅಮರನಾಥ ಯಾತ್ರಿಗಳ ಮೇಲೆ ಉಗ್ರರ ದಾಳಿ : 7 ಸಾವು

ಸೋಮವಾರ ಅನಂತನಾಗ್ ಜಿಲ್ಲೆಯಲ್ಲಿ ಬಸ್ಸಿನಲ್ಲಿ ತೆರಳುತ್ತಿದ್ದ ಅಮರನಾಥ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸಿ 7 ಜನ ಯಾತ್ರಿಕರನ್ನು ಕೊಂದಿದ್ದರು. ಘಟನೆಯಲ್ಲಿ 21 ಜನ ಗಾಯಗೊಂಡಿದ್ದರು.

Loading...