ಹೊಟ್ಟೆಗೆ ಒದ್ದ ಸಿಪಿಎಂ ನಾಯಕ, ಮಹಿಳೆಗೆ ಗರ್ಭಪಾತ

ಕೋಜಿಕೋಡ್: ನ್ಯಾಯ ಪಂಚಾಯ್ತಿ ಮಾಡಲು ಬಂದ ಕೇರಳದ ಆಡಳಿತ ಪಕ್ಷ ಸಿಪಿಎಂ ನಾಯಕನೊಬ್ಬ ಅಧಿಕಾರ ಮದದದಿಂದ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒದ್ದಿದ್ದಾನೆ. ಇದರಿಂದಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದ ಮಹಿಳೆಗೆ ಗರ್ಭಪಾತವಾಗಿದೆ. ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೆಕೆಂದು ಮಹಿಳೆಯ ಸಂಬಂಧಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಕೋಜಿಕೋಡ್ ನ ದಂಪತಿಗಳು ಸ್ಥಳೀಯ ಕಾಲೋನಿಯೊಂದರಲ್ಲಿ ವಾಸವಿದ್ದರು. ಸಂತ್ರಸ್ತ ಮಹಿಳೆ ನಾಲ್ಕು ತಿಂಗಳ ಗರ್ಭಿಣಿ. ಇತ್ತೀಚೆಗೆ ನೆರೆಮನೆಯ ವ್ಯಕ್ತಿಯೊಂದಿಗೆ ಈಕೆಯ ಕುಟುಂಬದೊಂದಿಗೆ ಒಂದು ವಿವಾದವುಂಟಾಗಿತ್ತು. ಇದನ್ನು ಬಗೆಹರಿಸಲು ಬಂದ ಸ್ಥಳೀಯ ಸಿಪಿಎಂ ನಾಯಕನೊಬ್ಬ ಗರ್ಭಿಣಿ ಮಹಿಳೆಯ ಗಂಡನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ತನ್ನ ಗಂಡನ ಮೇಲೆ ಹಲ್ಲೆ ಮಾಡದಂತೆ ಅಡ್ಡ ಬಂದ ಮಹಿಳೆಯ ಹೊಟ್ಟೆಗೇ ಒದ್ದಿದ್ದಾನೆ ಸಿಪಿಎಂ ಪಕ್ಷದ ನಾಯಕ. ಇದರಿಂದಾಗಿ ಮಹಿಳೆ ಸ್ಥಳದಲ್ಲಿಯೇ ಕುಸಿದು ಬಿದ್ದಳು.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಆಕೆಗೆ ಗರ್ಭಪಾತವಾಗಿದೆ ಎಂದು ವೈದ್ಯರು ಹೇಳಿದ್ದರೆ. ಫೆಬ್ರವರಿ 2 ರಂದು ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ಸಿಪಿಎಂ ಮುಖಂಡ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾನೆ.

ಓವೈಸಿ ಹೇಳಿಕೆಗೆ ಸೇನೆಯ ಖಡಕ್ ಉತ್ತರ

ದೂರು ವಾಪಸ್ ಪಡೆಯುವಂತೆ ಮಹಿಳೆಯ ಕುಟುಂಬದವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಮಹಿಳೆಯ ಕುಟುಂಬದವರ ಹಠ ಹಿಡಿದಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಲು ಸಿಪಿಎಂ ಮೂಲಗಳು ನಿರಾಕರಿಸುತ್ತಿವೆ.

Get Latest updates on WhatsApp. Send ‘Subscribe’ to 8550851559