ಮಸೀದಿಯೆದುರೇ ಮಧ್ಯರಾತ್ರಿ ಡಿಎಸ್ಪಿಯನ್ನು ಕಲ್ಲು ಹೊಡೆದು ಕೊಂದರು

View Later

ಜಮ್ಮೂ ಕಾಶ್ಮೀರದ ಶ್ರೀನಗರದಲ್ಲಿ ಪಾಶವೀಯ ಕೃತ್ಯವೊಂದು ನಡೆದಿದೆ. ಪೊಲೀಸ್ ಉಪ ಅಧೀಕ್ಷಕ ಆಯೂಬ್ ಪಂಡಿತ್ ರವರನ್ನು ಆಕ್ರೋಶಿತ ಜನರ ಗುಂಪೊಂದು ಹೊಡೆದು ಕೊಂದಿದೆ. ನೌಹಟ್ಟಾದಲ್ಲಿನ ಜಾಮಿಯಾ ಮಸೀದಿ ಬಳಿ ಗುರುವಾರ ಮಧ್ಯರಾತ್ರಿ 12:30 ರ ಸಮಯದಲ್ಲಿ ಈ ಘಟನೆ ನಡೆದಿದೆ. ಜಾಮಿಯಾ ಮಸೀದಿ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಎಸ್ಪಿ ಆಯೂಬ್ ಪಂಡಿತ್, ಮಸೀದಿಯಿಂದ ಹೊರಗೆ ಬರುತ್ತಿರುವವರ ಫೋಟೋ ತೆಗೆಯುತ್ತಿದ್ದರೆನ್ನಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಕೆಲ ವ್ಯಕ್ತಿಗಳು ಪೊಲೀಸ್ ಅಧಿಕಾರಿಯನ್ನು ಹಿಡಿಯಲು ಯತ್ನಿಸಿದರು. ಹೀಗಾಗಿ ಆತ್ಮರಕ್ಷಣೆಗಾಗಿ ಆಯೂಬ್ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದರು. ಇದರಿಂದ ಮೂವರು ಗಾಯಗೊಂಡರು. [ಇದನ್ನೂ ಓದಿ>ಸಾವಿನ ಕುರಿತ ಕೆಲ ಭಯಾನಕ ಸತ್ಯಗಳು]

ಇದರಿಂದ ಇನ್ನಷ್ಟು ಆಕ್ರೋಶಗೊಂಡ ಗುಂಪು ಏಕಾಏಕಿ ಪೊಲೀಸ್ ಅಧಿಕಾರಿಯ ಮೇಲೆ ಮುಗಿಬಿದ್ದಿದೆ. ಅವರನ್ನು ಸುತ್ತುವರೆದು ಬೆತ್ತಲೆ ಮಾಡಿ ಕಲ್ಲು ಹೊಡೆದು ಕೊಂದಿದೆ. ಹೆಚ್ಚು ಜನರಿದ್ದ ಕಾರಣ ಅವರ ಭದ್ರತಾ ಸಿಬ್ಬಂದಿ ಅಲ್ಲಿಂದ ಪರಾರಿಯಾದರು. ಈ ಘಟನೆ ಸ್ಥಳೀಯವಾಗಿ ತೀವ್ರ ಉದ್ವಿಘ್ನತೆಗೆ ಕಾರಣವಾಗಿದೆ.