ಹಿಂದೂಗಳ ಇತಿಹಾಸವನ್ನು ತಿರುಚಲು ವಿಶ್ವ ಮಟ್ಟದಲ್ಲಿ ಸಂಚು: ಸ್ವಾಮಿ – News Mirchi

ಹಿಂದೂಗಳ ಇತಿಹಾಸವನ್ನು ತಿರುಚಲು ವಿಶ್ವ ಮಟ್ಟದಲ್ಲಿ ಸಂಚು: ಸ್ವಾಮಿ

ನವದೆಹಲಿ: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ “ಪದ್ಮಾವತಿ” ಚಲನಚಿತ್ರದ ವಿವಾದಗಳು ದಿನೇದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಈ ಚಿತ್ರದ ಕುರಿತು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಸುಬ್ರಮಣ್ಯ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಹಿಂದುಗಳ ಇತಿಹಾಸವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚು ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅದರ ಭಾಗವಾಗಿಯೇ ಇಂತಹ ಚಿತ್ರಗಳು ಬರುತ್ತಿವೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಂ ರಾಜರನ್ನು ಹೀರೋಗಳಂತೆ ತೋರಿಸುವ ಯತ್ನದಲ್ಲಿ ಇತಿಹಾಸವನ್ನು ತಿರುಚುತ್ತಿದ್ದಾರೆ. ಮುಸ್ಲಿಂ ರಾಜರನ್ನು ಹೀರೋಗಳಂತೆ ಬಿಂಬಿಸಲು ದುಬೈ ವಾಸಿಗಳು ಕನಸು ಕಾಣುತ್ತಿದ್ದಾರೆ ಎಂದು ಸ್ವಾಮಿ ಆರೋಪಿಸಿದರು. ಅಮೀರ್ ಖಾನ್ ತೆಗೆದ ಪಿ.ಕೆ ಚಿತ್ರವೂ ಈ ವರ್ಗದಲ್ಲಿಯೇ ಬರುತ್ತದೆ, ಈ ಚಿತ್ರವನ್ನು ಪಾಕಿಸ್ತಾನವನ್ನು ಪ್ರೋತ್ಸಾಹಿಸುವಂತೆ ಇದೆ ಎಂದು ಹೇಳಿದರು.

ಡಿಸೆಂಬರ್ 1 ರಂದು ಬಿಡುಗಡೆಯಾಗಲಿರುವ ಪದ್ಮಾವತಿ ಚಿತ್ರದ ಕುರಿತು ಈಗಾಗಲೇ ಹಲವು ವಿವಾದಗಳು ಹುಟ್ಟಿಕೊಂಡಿವೆ. ರಜಪೂತ ಸಮುದಾಯ, ಕರ್ನೀಸೇನಾ, ಇತರೆ ಸಂಘಟನೆಗಳು ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಮತ್ತೊಂದೆಡೆ ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂದು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಚಿತ್ರದ ಕುರಿತು ಆಕ್ಷೇಪಗಳಿದ್ದರೆ ಸೆನ್ಸಾರ್ ಬೋರ್ಡ್ ಅನ್ನು ಸಂಪರ್ಕಿಸುವಂತೆ ಅರ್ಜಿ ದಾಖಲಿಸಿದವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!