ಮುಸ್ಲಿಮರ ಏಳಿಗೆಗೆ ಅಹಮದ್ ಅವರ ಕೊಡುಗೆ ಅಪಾರ : ಮೋದಿ |News Mirchi

ಮುಸ್ಲಿಮರ ಏಳಿಗೆಗೆ ಅಹಮದ್ ಅವರ ಕೊಡುಗೆ ಅಪಾರ : ಮೋದಿ

ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ನಾಯಕ ಇ.ಅಹಮದ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುವ ಪ್ರಧಾನಿ ಮೋದಿ, ಅಹಮದ್ ಅವರು ಮುಸ್ಲಿಂ ಸಮುದಾಯದ ಸಬಲೀಕರಣಕ್ಕೆ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.

ರಾಷ್ಟ್ರದ ಸೇವೆ ಮಾಡಲು ಶ್ರಮಿಸಿದ ಹಿರಿಯ ನಾಯಕ ಇ.ಅಹಮದ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕೇರಳ ಅಭಿವೃದ್ಧಿಗಾಗಿ ಅಹಮದ್ ಅವರು ತುಂಬಾ ಶ್ರಮಪಟ್ಟಿದ್ದಾರೆ, ಪಶ್ಚಿಮ ಏಷ್ಯಾ ಜೊತೆಗಿನ ಭಾರತದ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಅವರ ಪಾತ್ರವನ್ನು ಮರೆಯಲಾಗದು ಎಂದರು.

ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿರುವ ಅಹಮದ್ ರವರ ಮೃತದೇಹವನ್ನು ಇಂದು ಕೇರಳದ ಅವರ ಸ್ವಗ್ರಾಮಕ್ಕೆ ತರಲಾಗುತ್ತದೆ.

English Summary: Expressing condolence on the demise of former union minister and Indian Union Muslim League (IUML) leader E. Ahamed, Prime Minister Narendra Modi on Wednesday said the former’s empowerment of the Muslim community would be remembered.

Loading...
loading...
error: Content is protected !!