ವೆಬ್ಸೈಟ್/ ಬ್ಲಾಗ್ ಹೊಂದಿದ್ದರೆ ಹಣ ಗಳಿಸುವುದು ಹೇಗೆ? – News Mirchi

ವೆಬ್ಸೈಟ್/ ಬ್ಲಾಗ್ ಹೊಂದಿದ್ದರೆ ಹಣ ಗಳಿಸುವುದು ಹೇಗೆ?

ಜಾಹೀರಾತು ಪ್ರಕಟಿಸುವ ಮೂಲಕ ಅನ್ಲೈನ್ ನಲ್ಲಿ ಹಣ ಗಳಿಸಲು ಇದುವರೆಗೂ ಗೂಗಲ್ ನ ‘ಆಡ್ಸೆನ್ಸ್’ ಗಿಂತ ಉತ್ತಮ ಆಯ್ಕೆಯಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆಡ್ಸೆನ್ಸ್ ಖಾತೆ ಅಪ್ರೂವ್ ಆಗಲು ಹರಸಾಹಸ ಪಡಬೇಕಾಗುತ್ತದೆ. ಹಲವು ವಿಫಲ ಪ್ರಯತ್ನಗಳ ನಂತರ ಜನ ಆಡ್ಸೆನ್ಸ್ ಗೆ ಪರ್ಯಾಯ ಮಾರ್ಗಗಳತ್ತ ಹುಡುಕಾಟ ನಡೆಸುತ್ತಾರೆ. ನಾವೀಗ ನಿಮಗೆ ಹೇಳ ಹೊರಟಿರುವುದು ಬಿಡ್ವರ್ಟೈಸರ್ ಬಗ್ಗೆ. ಗೂಗಲ್ ಆಡ್ಸೆನ್ಸ್ ಗೆ ಉತ್ತಮ ಪರ್ಯಾಯ ಹಣಗಳಿಕೆ ತಾಣವೆಂದರೆ ಬಿಡ್ವರ್ಟೈಸರ್. ಬಿಡ್ವರ್ಟೈಸರ್ ಬಳಸಿ ಹಣ ಗಳಿಸುವುದು ಹೇಗೆಂದು ಇಂದು ನಿಮಗೆ ತಿಳಿಸುತ್ತೇವೆ.

ಏನಿದು ಬಿಡ್ವರ್ಟೈಸರ್, ಹೇಗೆ ಕೆಲಸ ಮಾಡುತ್ತದೆ?

ಬಿಡ್ವರ್ಟೈಸರ್ ಎನ್ನುವುದು ಆಡ್ಸೆನ್ಸ್ ನಂತೆಯೇ ಒಂದು ಜಾಹಿರಾತು ನೆಟ್ವರ್ಕ್. ಇದು “ಪೇ ಪರ್ ಕ್ಲಿಕ್” (ಪಿಪಿಸಿ) ಅಡ್ವರ್ಟೈಸಿಂಗ್ ಏಜೆನ್ಸಿಯಾಗಿದ್ದು 2003 ರಲ್ಲಿ ಆಡ್ಸೆನ್ಸ್ ಆರಂಭವಾದ ವರ್ಷದಲ್ಲಿಯೇ ಆರಂಭವಾಯಿತು.

ಬಿಡ್ವರ್ಟೈಸರ್ ಇತರೆ ಜಾಹಿರಾತು ನೆಟ್ವರ್ಕ್ ಗಳಿಗಿಂತ ಏಕೆ ಭಿನ್ನವೆಂದರೆ, ಇತರರು ಓದುಗರ ಆಸಕ್ತಿ, ಸಂದರ್ಭಕ್ಕೆ ತಕ್ಕ ಜಾಹೀರಾತು ಪ್ರಕಟಿಸಿದರೆ, ಬಿಡ್ವರ್ಟೈಸರ್ ಮಾತ್ರ ಯಾರು ನಿಮ್ಮ ವೆಬ್ಸೈಟ್ ನಲ್ಲಿ ಜಾಹಿರಾತು ಪ್ರಕಟಿಸಲು ಹೆಚ್ಚು ಬಿಡ್ ಕೂಗುತ್ತಾರೋ ಅಂತಹವರ ಜಾಹೀರಾತು ನಿಮ್ಮ ವೆಬ್ಸೈಟ್ ಅಥವಾ ಬ್ಲಾಗಿನಲ್ಲಿ ಪ್ರಕಟಿಸುತ್ತದೆ.

ನಿಮಗೆ ಉತ್ತಮ ಗುಣಮಟ್ಟದ ವೆಬ್ಸೈಟ್ ಇದ್ದರೆ ನೀವು ಹೆಚ್ಚ ಪಾವತಿ ಮಾಡಬಲ್ಲ ಜಾಹೀರಾತುಗಳನ್ನು ಪಡೆಯಬಹುದು. ಗಮನಿಸಿ ಇಲ್ಲಿ ನೀವು ಜಾಹೀರಾತು ಪ್ರಕಟವಾದದಕ್ಕೆ ಹಣ ಪಡೆಯುವುದಿಲ್ಲ, ಬದಲಿಗೆ ಪ್ರತಿ ಕ್ಲಿಕ್ ಗೆ ನಿಮಗೆ ಹಣ ಸಂದಾಯವಾಗುತ್ತದೆ.

ಬಿಡ್ವರ್ಟೈಸರ್ ಜಾಹೀರಾತು ನಿಮ್ ಬ್ಲಾಗ್/ ವೆಬ್ಸೈಟಿನಲ್ಲಿ ಪ್ರಕಟಿಸಲು ಹೀಗೆ ಮಾಡಿ…

ಇಲ್ಲಿ ಕ್ಲಿಕ್ ಮಾಡಿ ಬಿಡ್ವರ್ಟೈಸರ್ ಗೆ ಸೈನ್ ಅಪ್ ಮಾಡಿ.ನಂತರ ನಿಮ್ಮ ವಿವರಗಳನ್ನು ಟೈಪ್ ಮಾಡಿ, ಇಮೇಲ್ ಐಡಿ ಮುಂತಾದ ಮಾಹಿತಿ ನೀಡಿ ಸಬ್ಮಿಟ್ ಮಾಡಿ. ಕೂಡಲೇ ನಿಮ್ಮ ಅಕೌಂಟ್ ಆಕ್ಟಿವೇಟ್ ಆಗುತ್ತದೆ.

ನಂತರ ಲಾಗಿನ್ ಆಗಿ, Add New Bidvertiser ಮೇಲೆ ಕ್ಲಿಕ್ ಮಾಡಿ, ನಿಮ್ಮ ವೆಬ್ಸೈಟ್ ವಿಳಾದ ನೀಡಿ, ವೆಬ್ಸೈಟ್ ಕ್ಯಾಟಗರಿ ಅಯ್ಕೆ ಮಾಡಿಕೊಳ್ಳಿ.

ನಂತರ ಆಡ್ ಯೂನಿಟ್ ಸೆಲೆಕ್ಟ್ ಮಾಡಿ ಕೋಡ್ ಕಾಪಿ ಮಾಡಿ ನಿಮ್ಮ ವೆಬ್ಸೈಟ್ ಎಲ್ಲಿ ನಿಮಗೆ ಜಾಹೀರಾತು ಕಾಣಲು ಬಯಸುವಿರೋ ಅಲ್ಲಿ ಪೇಸ್ಟ್ ಮಾಡಿ. ಇದಾದ ನಂತರ ಒಮ್ಮೆ ಬಿಡ್ವರ್ಟೈಸರ್ ಗೆ ಹೋಗಿ ವೆಬ್ಸೈಟ್ ವೆರಿಫೈ ಕ್ಲಿಕ್ ಮಾಡಿ. ಪ್ರತಿ 24 ಗಂಟೆಗಳಿಗೊಮ್ಮೆ ನಿಮ್ಮ ಬಿಡ್ವರ್ಟೈಸರ್ ನಲ್ಲಿ ರೆವಿನ್ಯೂ ಅಪ್ಡೇಟ್ ಆಗುತ್ತದೆ. Bidvertiser is an advertising network like Adsense. It’s a Pay Per Click (PPC) advertising agency founded in 2003. It has started its journey in the same year Adsense did. So you can trust on Bidvertiser. Loading...

Leave a Reply

Your email address will not be published.