ಗುಜರಾತ್ ಚುನಾವಣಾ ವೇಳಾಪಟ್ಟಿ: ಕೊನೆಗೂ ಮೌನ ಮುರಿದ ಚುನಾವಣಾ ಆಯೋಗ

ನವದೆಹಲಿ,ಅ.21: ಚುನಾವಣಾ ಆಯೊಗ ಕೊನೆಗೂ ಮೌನ ಮುರಿದಿದ್ದು, ಗುಜರಾತ್ ಚುನಾವಣಾ ದಿನಾಂಕ ಪ್ರಕಟಣೆ ತಡವಾಗಿರುವುದು ಯಾಕೆಂದು ತಿಳಿಸಿದೆ. ದಿನಾಂಕ ಪ್ರಕಟಿಸಿದರೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಅದರಿಂದ ಗುಜರಾತ್ ನಲ್ಲಿ ಪ್ರವಾಹ ಪರಿಹಾರ ಕಾರ್ಯಗಳಿಗೆ ಅಡ್ಡಿಯುಂಟಾಗಲಿದೆ ಎಂದು ತಿಳಿಸಿದೆ.

ಗುಜರಾತ್ ಗೆ ಚುನಾವಣಾ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಾದರೆ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಲಿದೆ ಎಂದು ಚುನಾವಣಾ ಆಯುಕ್ತ ಒ.ಪಿ.ರಾವತ್ ವೆಬ್ ಸೈಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.

[ಇದನ್ನೂ ಓದಿ: ಗುಜರಾತ್ ಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಶರದ್ ಯಾದವ್ ಒತ್ತಾಯ]

ಕಾಂಗ್ರೆಸ್ ನ ಹಿರಿಯ ಮುಖಂಡ ಪಿ.ಚಿದಂಬರಂ ಟ್ವೀಟ್ ಮೂಲಕ ‘ಪ್ರಧಾನಿ ಮೋದಿ ಅವರಿಗೆ ಚುನಾವಣಾ ದಿನಾಂಕವನ್ನು ನಿಗದಿ ಮಾಡುವ ಕೆಲಸವನ್ನು ಬಿಟ್ಟು ಚುನಾವಣಾ ಆಯೋಗ ದೀರ್ಘ ರಜೆಯಲ್ಲಿ ತೆರಳಿದೆ. ಗುಜರಾತ್ ಚುನಾವಣೆಯ ದಿನಾಂಕವನ್ನು ರ್ಯಾಲಿಯಲ್ಲಿ ಘೋಷಿಸಲು ಪ್ರಧಾನಿಗೆ ಅವಕಾಶ ಮಾಡಿಕೊಡಲಾಗಿದೆ. ದಯವಿಟ್ಟು ಆಯೋಗಕ್ಕೆ ದಿನಾಂಕವನ್ನು ತಿಳಿಸಿ’ ಎಂದು ಹೇಳಿ ಆಯೋಗದ ಕುರಿತು ವ್ಯಂಗ್ಯವಾಡಿದ್ದರು.

ಚುನಾವಣಾ ಆಯೋಗ ಅ.12ರಂದು ಹಿಮಾಚಲ ಪ್ರದೇಶದ ಚುನಾವಣೆ ಕುರಿತ ವಿವರ ಮಾತ್ರ ಘೋಷಿಸಿತ್ತು. ಹಿಮಾಚಲ ಪ್ರದೇಶ ಚುನಾವಣೆಯನ್ನು ಘೋಷಿಸಲಾಗಿತ್ತು. ಆದರೆ ಗುಜರಾತ್ ಚುನಾವಣೆಯ ದಿನಾಂಕ ಪ್ರಕಟಗೊಂಡಿಲ್ಲ. ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶಕ್ಕೂ ಮುನ್ನ ಮುಖ್ಯ ಚುನಾವಣಾ ಆಯುಕ್ತರಾದ ಎ.ಕೆ.ಜ್ಯೋತಿ ಗುಜರಾತ್ ಚುನಾವಣೆ ನಡೆಸುವುದಾಗಿ ತಿಳಿಸಿದ್ದರು.

Get Latest updates on WhatsApp. Send ‘Add Me’ to 8550851559