ಶಶಿಕಲಾಳಿಗೆ ಶಾಕ್ ನೀಡಿದ ಚುನಾವಣಾ ಆಯೋಗ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಬಹುಮತ ಸಾಬೀತುಪಡಿಸುವುದಕ್ಕೂ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಅಣ್ಣಾಡಿಎಂಕೆ ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿಯಾಗಿ ಹೇಗೆ ಆಯ್ಕೆ ಆಗಿದ್ದೀರಿ ಎಂಬುದರ ಬಗ್ಗೆ ವಿವಿರ ನೀಡಬೇಕೆಂದು ನೋಟೀಸ್ ಕಳುಹಿಸಿದೆ. ಈ ತಿಂಗಳು 28 ರೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ. ಅಣ್ಣಾಡಿಎಂಕೆ ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನೇಮಕ ಅಕ್ರಮ ಎಂದು ಪಕ್ಷದ ನಾಯಕ ವಿ.ಮೈತ್ರೇಯನ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನೋಟೀಸ್ ನೀಡಿದೆ.