ಸಾಕ್ಷಿ ಮಹಾರಾಜ್ ವಿವಾದಿತ ಹೇಳಿಕೆ, ವರದಿ ಕೇಳಿದ ಚುನಾವಣಾ ಆಯೋಗ |News Mirchi

ಸಾಕ್ಷಿ ಮಹಾರಾಜ್ ವಿವಾದಿತ ಹೇಳಿಕೆ, ವರದಿ ಕೇಳಿದ ಚುನಾವಣಾ ಆಯೋಗ

ಸಾಕ್ಷಿ‌ಮಹಾರಾಜ್ ರವರ ವಿವಾದಿತ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮೀರತ್ ಜಿಲ್ಲಾಡಳಿತದಿಂದ ವರದಿ ಕೇಳಿದೆ. ಮತ್ತೊಂದು ಕಡೆ ಮುಸ್ಲಿಮರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪದ ಮೇಲೆ ಪೊಲೀಸರು ಸಾಕ್ಷಿ ಮಹಾರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಶುಕ್ರವಾರ ಧಾರ್ಮಿಕ ಸಭೆಯೊಂದರಲ್ಲಿ ಸಮಾನ ನಾಗರಿಕ ಸಂಹಿತೆಗೆ ಆಗ್ರಹಿಸಿದ ಉನ್ನಾವ್ ಸಂಸದ ಸಾಕ್ಷಿ ಮಹಾರಾಜ್, ಜನಸಂಖ್ಯೆ ಏರಿಕೆಗೆ 4 ಪತ್ನಿ, 40 ಮಕ್ಕಳನ್ನು ಪಡೆದವರೇ ಕಾರಣ ಹೊರತು ಹಿಂದೂಗಳಲ್ಲ ಎಂದು ಹೇಳಿದ್ದರು.

ಸಾಕ್ಷಿ ಮಹಾರಾಜ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷಗಳು, ಆತನ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದವು.

ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಸಾಕ್ಷಿ ಮಹಾರಾಜ್, ಸಾಧು ಸಂತರ ಸಭೆಯಲ್ಲಿ ಹೇಳಿಕೆ ನೀಡಲಾಗಿದ್ದು, ಯಾವುದೇ ಕೋಮು ಭಾಷಣ ಮಾಡಿರಲಿಲ್ಲ. ಭಾಷಣದಲ್ಲಿ ಜನಸಂಖ್ಯೆ ಏರಿಕೆ ಕುರಿತು ಕಳವಳ ವ್ಯಕ್ತಪಡಿಸಿದ್ದೆ. ಭಾಷಣದ ವೀಡಿಯೋ ದಾಖಲೆ ಇದ್ದು, ಎಲ್ಲೂ ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ಸಮುದಾಯದ ತಾಯಂದಿರನ್ನು ಗೌರವಿಸಬೇಕು ಮತ್ತು ಮಕ್ಕಳನ್ನು ಹೆರುವ ಯಂತ್ರಗಳಂತೆ ಪರಿಗಣಿಸಬಾರದು ಎಂದು ತಾವು ಹೇಳಿದ್ದು, ಮಾಧ್ಯಮಗಳು ತಮ್ಮ ಮಾತನ್ನು ತಿರುಚಿವೆ ಎಂದು ಆರೋಪಿಸಿದರು.

Loading...
loading...
error: Content is protected !!