ಗುಜರಾತ್ ಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲು ಶರದ್ ಯಾದವ್ ಒತ್ತಾಯ

ನವದೆಹಲಿ: ಹಿಮಾಚಲ ಪ್ರದೇಶ ರಾಜ್ಯದ ಚುನಾವಣಾ ವೇಳಾಪಟ್ಟಿ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ, ಗುಜರಾತ್ ರಾಜ್ಯಕ್ಕೂ ವೇಳಾಪಟ್ಟಿ ಘೋಷಿಸಬೇಕು ಎಂದು ಜೆಡಿ(ಯು) ನಾಯಕ ಹಾಗೂ ರಾಜ್ಯಸಭಾ ಸಂಸದ ಶರದ್ ಯಾದವ್ ಹೇಳಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿ ಘೋಷಿಸದೆ ಇರುವುದರಿಂದ ಚುನಾವಣಾ ಆಯೋಗದ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಾಗಿದೆ ಎಂದು ಅವರು ಹೇಳಿದ್ದಾರೆ.

[ಇದನ್ನೂ ಓದಿ: ಎರಡನೇ ದಿನವೇ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ ‘ಸೀಕ್ರೆಟ್ ಸೂಪರ್ ಸ್ಟಾರ್’]

ಭ್ರಷ್ಟಾಚಾರದ ವಿಷಯದಲ್ಲಿ ಬಿಜೆಪಿಯ ದ್ವಂದ್ವ ನೀತಿ ಅನುಸರಿಸುತ್ತಿದೆ, ಇದಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಒಂದು ಉದಾಹರಣೆ ಎಂದು ಅವರು ಹೇಳಿದರು. ದೇಶದ ಜನತೆಗೆ ಚುನಾವಣಾ ಆಯೋಗದ ಮೇಲೆ ವಿಶ್ವಾಸವಿದೆ. ಅದು ಕಡಿಮೆಯಾಗುವ ಮುನ್ನವೇ ಗುಜರಾತ್ ಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಶರದ್ ಯಾದವ್ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

Get Latest updates on WhatsApp. Send ‘Add Me’ to 8550851559