ಮಲ್ಯಾ ಕರೆತರಲು ಕೋರ್ಟ್ ಅನುಮತಿ ಪಡೆದ ಜಾರಿ ನಿರ್ದೇಶನಾಲಯ – News Mirchi

ಮಲ್ಯಾ ಕರೆತರಲು ಕೋರ್ಟ್ ಅನುಮತಿ ಪಡೆದ ಜಾರಿ ನಿರ್ದೇಶನಾಲಯ

ಮುಂಬೈ: ಮದ್ಯದ ದೊರೆ ವಿಜಯ್ ಮಲ್ಯಾ ರವರನ್ನು ದೇಶಕ್ಕೆ ಕರೆತರುವ ಪ್ರಯತ್ನಗಳು ವೇಗ ಪಡೆದಿವೆ. ಪರಸ್ಪರ ಕಾನೂನು ಸಹಕಾರ ಒಪ್ಪಂದದಡಿ ಭಾರತ-ಬ್ರಿಟನ್ ನಡುವೆ ಇರುವ ಒಪ್ಪಂದ(ಎಂ.ಎಲ್.ಎ.ಟಿ) ನಿಯಮಗಳ ಪ್ರಕಾರ ವಿಜಯ್ ಮಲ್ಯಾರನ್ನು ಕರೆತರಲು ತಮಗೆ ಅನುಮತಿ ನೀಡಬೇಕು ಎಂದು ಜಾರಿ ನಿರ್ದೇಶನಾಲಯ(ಇಡಿ) ಮಾಡಿದ್ದ ಮನವಿಯನ್ನು ಕೋರ್ಟ್ ಪುರಸ್ಕರಿಸಿದೆ. ಈ ಒಪ್ಪಂದದಲ್ಲಿನ ನಿಯಮಗಳ ಪ್ರಕಾರ ಮಲ್ಯಾ ರವರನ್ನು ಕರೆತರಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಆದೇಶಿಸಿದೆ. ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಜಾರಿ ನಿರ್ದೇಶನಾಲಯ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ.

ಕೇಂದ್ರ ಸರ್ಕಾರ ಅನಮೋದಿಸಿದರೆ ಎಂಎಲ್ಎಟಿ ನಿಯಮಗಳ ಅಡಿ ಮಲ್ಯಾ ರವರನ್ನು ಭಾರತಕ್ಕೆ ಕರೆತರಲು ಬ್ರಿಟೀಷ್ ಸರ್ಕಾರ ಸಹಕಾರ ನೀಡಬೇಕಿರುತ್ತದೆ. ಕಾನೂನಿನಲ್ಲಿರುವ ಲೋಪಗಳನ್ನು ಮುಂದಿಟ್ಟುಕೊಂಡು ಅಪರಾಧಿಗಳು ತಪ್ಪಿಸಿಕೊಳ್ಳದಂತೆ ಮಾಡಲು 1992  ರಲ್ಲಿ ಭಾರತ-ಬ್ರಿಟನ್ ಎಂಎಲ್ಎಟಿ ಒಪ್ಪಂದ ಮಾಡಿಕೊಂಡಿದ್ದವು.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!