ಮಿಸ್ಟರ್ ದಲಿತ್ ಚಳುವಳಿಯ ಹಿಂದಿನ ಅಸಲಿ ಬಣ್ಣ ಬಯಲು! – News Mirchi

ಮಿಸ್ಟರ್ ದಲಿತ್ ಚಳುವಳಿಯ ಹಿಂದಿನ ಅಸಲಿ ಬಣ್ಣ ಬಯಲು!

ಅಹಮದಾಬಾದ್: ಎರಡು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಬಿರುಸಿನ ಪ್ರಚಾರ ಪಡೆದಿರುವ ಮಿಸ್ಟರ್ ದಲಿತ್ ಚಳುವಳಿಗೆ ಸಂಬಂಧಿಸಿದಂತೆ ಶಾಕಿಂಗ್ ಸತ್ಯ ಬೆಳಕಿಗೆ ಬಂದಿದೆ. ತಮ್ಮ ಮೇಲೆ ಮೇಲ್ವರ್ಗದವರು ದಾಳಿ ನಡೆಸುತ್ತಿದ್ದಾರೆ ಎಂದು ವಿನೂತನ ಶೈಲಿಯಲ್ಲಿ ಯುವಕರು ಪ್ರತಿಭಟನೆ ಕೈಗೊಂಡಿದ್ದರು. ಮೀಸೆ ತಿರುವುತ್ತಿರುವ ಫೋಟೋಗಳನ್ನು ಪ್ರತಿಯೊಬ್ಬರೂ ತಮ್ಮ ವಾಟ್ಸಾಪ್ ಪ್ರೊಫೈಲ್ ಪಿಕ್ಚರ್ ಆಗಿ ಇಟ್ಟುಕೊಂಡಿದ್ದಾರೆ. ಇದು ಬಹು ಬೇಗನೆ ದೇಶದ ಗಮನ ಸೆಳೆಯಿತು.

[ಇದನ್ನೂ ಓದಿ: ಪಾಕ್ ನಿಂದ ಭಾರತಕ್ಕೆ ಕೊರೆದ ಸುರಂಗ ಮಾರ್ಗ ಪತ್ತೆ]

ಸ್ನೇಹಿತರಿಗೆ ಹೇಳಿ ಹಲ್ಲೆ ಮಾಡಿಸಿಕೊಂಡಿದ್ದ

ಆದರೆ ಈ ವಿನೂತನ ರೀತಿಯ ಪ್ರತಿಭಟನೆಗೆ ಕಾರಣವಾದ ದಿಗಂತ್ ಮಹೇರಿಯಾ ಮೇಲಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಸತ್ಯವನ್ನು ಬಯಲಿಗೆಳೆದಿದ್ದಾರೆ. ಅಸಲಿಗೆ ಆ ಯುವಕನ ಮೇಲೆ ಯಾರೂ ದಾಳಿಯೇ ನಡೆಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ. ಕೇವಲ ಮಾಧ್ಯಮಗಳ ಗಮನಸೆಳೆಯಲೆಂದೇ ಆ ಯುವಕ ತನ್ನ ಮೇಲೆ ಮೇಲ್ವರ್ಗದವರು ದಾಳಿ ನಡೆಸಿದಂತೆ ನಾಟಕವಾಡಿದ್ದಾನೆ. ಬ್ಲೇಡ್ ನಿಂದ ದಾಳಿ ಮಾಡಿದ್ದು ಬೇರೆ ಯಾರೂ ಅಲ್ಲ, ಸ್ವತಃ ಆತನ ಸ್ನೇಹಿತರೇ ಎಂದು ಪೊಲೀಸರು ಹೇಳುತ್ತಿದ್ದಾರೆ. ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದ ಫೋರೆನ್ಸಿಕ್ ತಂಡಕ್ಕೆ ರಕ್ತದ ಕಲೆಗಳು ಲಭ್ಯವಾಗದಿದ್ದರಿಂದ ಅನುಮಾನಗಳು ಆರಂಭವಾಗಿದ್ದವು.

ಹೀಗಾಗಿ 17 ವರ್ಷ ವಯಸ್ಸಿನ ದಿಗಂತ್ ನನ್ನು ತೀವ್ರ ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ ಎಂದು ಪೊಲೀಸ್ ಅಧಿಕಾರಿ ವೀರೇಂದ್ರ ಯಾದವ್ ಹೇಳಿದ್ದಾರೆ. ಪೊಲೀಸರು ಹೇಳುವಂತೆ ತನ್ನಿಬ್ಬರು ಸ್ನೇಹಿತರಿಗೆ ತನ್ನ ಮೇಲೆ ದಾಳಿ ನಡೆಸುವಂತೆ ದಿಗಂತ್ ಕೋರಿದ್ದ. ಮೊದಲು ರಾಡ್ ನಿಂದ ಹಲ್ಲೆ ನಡೆಸುವಂತೆ ದಿಗಂತ್ ಹೇಳಿದ್ದ. ಆದರೆ ನಂತರ ಯೋಜನೆ ಬದಲಿಸಿ ಬ್ಲೇಡ್ ನಿಂದ ದಾಳಿ ನಡೆಸುವಂತೆ ಸೂಚಿಸಿದ್ದನಂತೆ. ಮೇಲ್ವರ್ಗದವರೇ ಈ ದಾಳಿ ನಡೆಸಿದರು ಎಂದು ಆತನ ತಂದೆ ತಾಯಿಯೂ ಕೂಡಾ ಹೇಳಿದ ಉದ್ದೇಶವೇನು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗಬೇಕಿದೆ. ಈ ಸುಳ್ಳು ಪ್ರತಿಭಟನೆಯ ಹಿಂದೆ ಕಾಣದ ಕೈಗಳ ಕೈವಾಡವೇನಾದರೂ ಇದೆಯಾ ಎಂದೂ ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...