ಇಗೋ(Ego) ಕನ್ನಡ |News Mirchi

ಇಗೋ(Ego) ಕನ್ನಡ

ಅದೊಂದು ಸುಂದರ ಸಮಾರಂಭ , ಕಣ್ಣು ಹಾಯಿಸಿದಷ್ಟು ಅರಿಶಿನ ಕುಂಕುಮ ರಂಗಿನ ಸಮಾಗಮ. ವೇದಿಕೆಯ ಮೇಲೆ, ವೇದಿಕೆಯ ಕೆಳಗೆ ಎಲ್ಲರ ನಡೆ ನುಡಿಗಳಲ್ಲಿ ಅದೇ ಬಣ್ಣಗಳು. ಎಲ್ಲಡೆ ಸಾಧಕರ ಭಾವ ಚಿತ್ರಗಳು ಕಂಗೊಳಿಸುತಿದ್ದವು. ಅ ದಿನದ ವೈಭವ ದೇವಲೋಕವನ್ನೇ ನಾಚುವಷ್ಟು ಇತ್ತು. ಎಲ್ಲರ ಮೈಯಲ್ಲಿ ಒಂದು ವಿಶೇಷವಾದ ಶಕ್ತಿಯೊಂದು ಅವರಿಗರಿವಿಲ್ಲದೆ  ಹರಿದಾಡುತಿತ್ತು. ಅಲ್ಲಿ ನೆರೆದಿದ್ದ ಪ್ರೇಕ್ಷಕರ ಮತ್ತು ಆಯೋಜಕರ ವರ್ತನೆ ಒಂದರ್ಥದಲ್ಲಿ ಭಗಿರತನ ಸಾಧನೆಯನ್ನು ಮಿರಿಸುವಷ್ಟು ಇತ್ತು.

ಸಮಾರಂಭ

ಅದ್ದೂರಿಯಾಗಿ ನಡೆಯಿತೆನು ನಿಜ,  ಸಮಾರಂಭದ  ನಂತರ ನಡೆದದು ಒಂದು ದುರದೃಷ್ಟಕರ ಬೆಳವಣಿಗೆ ಎನ್ನ ಬಹುದು. ಅವರ ಅಭಿಮಾನವೆಲ್ಲ ಪೊಳ್ಳು ಎನ್ನುವುದಕ್ಕೆ ಘಟನೆಗಳು ಎಳೆ ಎಳೆಯಾಗಿ ಗೋಚರಿಸುತ್ತ ಬಂದವು. ಅಂದು ನಮ್ಮ ಪೂರ್ವಜರ ರೀತಿ ಕುಣಿದು ಕುಪ್ಪಳಿಸಿದವರು ಕೇವಲ ಕಾರ್ಯಕ್ರಮಕ್ಕೆ ಮಾತ್ರ  ಸೀಮಿತರಾಗಿದ್ದರು. ಮುಂದಿನ ವರ್ಷ ಇದಕ್ಕಿಂತ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ  ಯೋಚನೆಯಲ್ಲಿ ಇದ್ದರೆ ಹೊರತು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸುವ  ಅದರ ಸಾರ್ಥಕತೆಯನ್ನು ತಿಳಿಸುವ ಉದ್ದೇಶಗಳು ಅವರಲ್ಲಿ ಇರಲಿಲ್ಲ. ಮುಂದಿನ ವರ್ಷ ಸಿಗೋಣ ಕಣಮ್ಮಾ ಎಂದ ಹೇಳಿ ಎದ್ದೆ ಬಿಟ್ಟರು. ಇಲ್ಲಿವರೆಗೂ ಬಿಲ್ಡ್ ಅಪ್ ಕೊಟ್ಟಿದ್ ನೋಡಿದರೆ ಈ ಲೇಖನದ ಉದ್ದೇಶ ಏನು ಅಂತ ಅರ್ಥ ಆಗೋದು ಸ್ವಲ್ಪ ಕಷ್ಟನೇ.

ನಾನು ಮಾತನಾಡುತ್ತಾ ಇರುವುದು ರಾಜ್ಯೋತ್ಸವದ ಬಗ್ಗೆ.

ಎಲ್ಲರೂ ಮಾಡುತ್ತಾರೆ ರಾಜ್ಯೋತ್ಸವ, ನಮ್ಮ ಅಬ್ಬರ ಅವರಿಗಿಂತ ಜಾಸ್ತಿನೇ ಇರಬೇಕು ಎಂದು ಮಾಡುವ ರಾಜ್ಯೋತ್ಸವಗಳು ಇಂದು ಜಾಸ್ತಿನೇ. ಕೇವಲ ನವೆಂಬರ್ ಮಾಸಕ್ಕೆ ಮೀಸಲಾದ ಜನರು ಇಂದಿನ ಕನ್ನಡಿಗರು ಎಂದು ನಿಸ್ಸಂದೇಹವಾಗಿ ಹೇಳಬಹುದು.  

ನಿಮಗೆ ಅರಿವಿದೆಯೋ ಇಲ್ಲವೋ ಕನ್ನಡಕ್ಕೆ  ಸುಮಾರು ೧೫೦೦ಕ್ಕು ಹಿಂದಿನ ಇತಿಹಾಸ , ೩೮ ಮಿಲಿಯನ್ ಭಾಷಿಕರು , ಸರ್ವ ಶ್ರೇಷ್ಠ ಸಾಹಿತ್ಯ, ಜ್ಞಾನ ಪೀಠಗಳು ಎಂಟು , ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು  ೫೬, ಸರಸ್ವತಿ ಸಮ್ಮಾನ್ , ಕಾಳಿದಾಸ್ ಸಮ್ಮಾನ್ ಎಲ್ಲದರಲ್ಲೂ ಮುಂಚೂಣಿಯಲ್ಲಿ ಇದ್ದೀವಿ. ಆದರೆ ಭಾಷಾಭಿಮಾನ ಮತ್ತು ಸಾಹಿತ್ಯಾಭಿಮಾನ ಒಂದು ಚೂರು ಇಲ್ಲ. ಕನ್ನಡ ಎಂದರೆ ನವೆಂಬರ್ ಮಾತ್ರ ಎನ್ನುವ ತಾತ್ಸಾರ ಮನೋಭಾವದರು ನಾವಗಿದ್ದೇವೆ. ” ಕನ್ನಡ ಉಳಿಸಿ , ಕನ್ನಡ ಬೆಳೆಸಿ ” ಘೋಷಣೆಗಳಿಗೆ ಏನು ಕೊರತೆ ಇಲ್ಲ.

ಕನ್ನಡದ ಪ್ರಖ್ಯಾತ ಸಾಹಿತಿಯೊಬ್ಬರ ಮೊಮ್ಮಕ್ಕಳಿಗೆ ಕನ್ನಡದ ಜ್ಞಾನವಿಲ್ಲ(ಮಾತನಾಡುವುದಕ್ಕೂ, ಓದುವುದಕ್ಕೂ ಮತ್ತು ಬರೆಯುವುದಕ್ಕೂ ಬರುವುದಿಲ್ಲ, ಇವರೆಲ್ಲಾ ವಿದೇಶದಲ್ಲಿ ನೆಲೆಸಿದ್ದಾರೆ) ಎಂದು ಕನ್ನಡದ ದಿನ ಪತ್ರಿಕೆಯೊಂದು ವರದಿ ಮಾಡಿತ್ತು. ಸಾಹಿತಿಗಳ ಮನೆಯವರ ಕತೆ ಹೀಗಾದರೆ ಜನ ಸಾಮಾನ್ಯನ ಪಾಡೇನು?
 

ಇಂದು ಅಂತರರಾಷ್ಟ್ರೀಯ ಮಾತೃ ಭಾಷಾ ದಿನ(ಫೆಬ್ರವರಿ ೨೧) ,  ಮಾತು ಕಲಿಸಿದ ನಿಮ್ಮ ತಾಯಿಯನ್ನು  ಮತ್ತೊಮ್ಮೆ ಸ್ಮರಿಸುವ ದಿನ. ನಮ್ಮನ್ನು ಸೃಜನಶೀಲ ಮಾನವನನ್ನಾಗಿ ಮಾರ್ಪಡಿಸಿದ ಭಾಷೆಗೆ ಒಂದು ಚೂರು ಮಮತೆಯನ್ನಾದರೂ ತೋರಿಸುವುದು ನಮ್ಮ ಕನಿಷ್ಠ ಕರ್ತವ್ಯ ಅಲ್ಲವೇ.

ನಮ್ಮ  Egoವನ್ನು ಬದಿಗೆ ಸರಿಸಿ ,ಒಮ್ಮೆಯಾದರೂ ಕನ್ನಡ ಭಾಷೆಗೆ ಋಣ ತಿರಿಸಿ ಋಣ ಮುಕ್ತರಾಗೋಣ.

 

ನಮಗೆ ಜ್ಞಾನ ಪೀಠಗಳು
ಎಂಟು!
ಇನ್ನಾದರೂ ಬೆಳಸಿಕೊ
ಕನ್ನಡದ ನಂಟು !!
 


ಕನ್ನಡಕ್ಕೆ ನೀವು ಮಾಡಬೇಕಾದ ಸೇವೆ ಇಷ್ಟೇ  

ನಿಮ್ಮ ನಡೆ , ನುಡಿ ಕನ್ನಡವಾಗಿರಲಿ. ಅರ್ಥಾತ್ ಅಂಗ್ಲ ಭಾಷೆಯ ಪದಗಳನ್ನು ಅನಿವಾರ್ಯ ಎಂದಾಗ ಮಾತ್ರ  ಬಳಸಿ ಉಳಿದೆಲ್ಲ ಸಮಯದಲೆಲ್ಲ ಪರಿಶುದ್ದ ಕನ್ನಡ ಬಳಸಿ ಮೊದ ಮೊದಲಿಗೆ ಸ್ವಲ್ಪ ಮುಜುಗರವಾಗಬಹುದು ತರುವಾಯ ಎಲ್ಲವೋ ದಾರಿಗೆ ಬರುತ್ತದೆ.
ನಮಗೆ ಜ್ಞಾನ ಪೀಠಗಳು ಎಂಟು ಎಂದು ಕೊಚ್ಚಿ ಕೊಳ್ಳುವ ಬದಲು ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಮನೆ ಮತ್ತು ಮನದಲ್ಲಿ  ಕನ್ನಡದ  ಪೀಠವನ್ನು ಪ್ರತಿಷ್ಟಾಪಿಸಿ.ವರ್ಷಕ್ಕೆ ಕನಿಷ್ಠ ೨೫ ಕನ್ನಡ ಪುಸ್ತಕವನ್ನು ಓದುವ ಸಂಕಲ್ಪ ಮಾಡಿ. ಸಾಹಿತ್ಯಕ್ಕೆ ಇರುವ ಶಕ್ತಿ ಬೇರಾವುದಕ್ಕೆ ಇಲ್ಲ ಎಂಬುದನ್ನು ಅರಿಯಿರಿ.
 
ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ತಮ್ಮ ಸ್ನೇಹಿತರ ಜೊತೆ ಹೆಚ್ಚಾಗಿ ಕನ್ನಡದಲ್ಲೇ ಮಾತನಾಡುವುದನ್ನು ಪ್ರೋತ್ಸಾಹಿಸಿ. ಸಂಸ್ಥೆಯ ಹಿರಿಯ ಹುದ್ದೆಯಲ್ಲಿ ತೊಡಗಿಸಿ ಕೊಂಡವರು ” ಹಲೋ ಹೌ ಅರ್ ಯು ” ಎನ್ನುವುದರ ಬದಲು  “ನಮಸ್ಕಾರ, ಹೇಗಿದಿಯಪ್ಪ?” ಎಂದು ಮೊದಲು ಆಚರಣೆಗೆ ತಂದಲ್ಲಿ ಅದರ ಪರಿಣಾಮವನ್ನು ಊಹಿಸಿ ಕೊಳ್ಳುವುದಕ್ಕೆ ಅಸಾಧ್ಯವೆನ್ನ ಬಹುದು.
 
ಮಕ್ಕಳಿಗೆ ಅಮ್ಮ ಅಪ್ಪ ಎನ್ನುವ ಸಂಸ್ಕೃತಿ ಕಲಿಸಿ, ಮಮ್ಮಿ ಡ್ಯಾಡಿ ಮನೆಯಿಂದ ಹೊರಗೆ ಕಳಿಸಿ. ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್ ಬದಲು  ” ಒಂದು ಎರಡು ಬಾಳೆ ಎಲೆ ಹರಡು ” , ” ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ “, ” ಬಹಳ ಒಳ್ಳೆಯವರು ನಮ್ಮ ಮಿಸ್ಸು ”  ಹೇಳಿ ಕೊಡಿ. ” ಚಿನ್ನು ಸೆ ಹಾಯ್ ಟು ಅಂಕಲ್ ” ಕಿತ್ತು ಹಾಕಿ,  ” ಹೇಗಿದ್ದೀರ ಎಂದು ಸರಿಯಾದ ಸಂಬಂಧ ಸೂಚಕ ಬಳಸಿ ಮಾತನಾಡುವುದನ್ನು ಕಲಿಸಿ 
 
ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಕಾಡು ಕುದುರೆಯ  ಹುಚ್ಚು ಕುಣಿತಗಳು , ಅಸಂಬದ್ದ ಮ್ಯಾಡ್ ಅಡ್ಸ್ , ಮೈಮೆ  ಮುಂತಾದ  ಅರ್ಥಹೀನ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು ಸಾಹಿತ್ಯ ಮತ್ತು ಸಂಸ್ಕೃತಿಗೆ ಮಿಸಲಿಡಿ. ಅಲ್ಲಿ ನೆರೆದಿರುವ ಪ್ರೇಕ್ಷರಿಗೆ ಕನ್ನಡದ ಹಿರಿಮೆ ಮತ್ತು ಕನ್ನಡ ಸಂಸ್ಕೃತಿಯ ಕಡೆ ಸೆಳೆಯುವಂತ ಕಾರ್ಯಕ್ರಮಗಳನ್ನು ಆಯೋಜಿಸಿ.
 

ನೀವು ಅಪ್ಪಟ ಕನ್ನಡದ ಅಭಿಮಾನಿಯಾಗಿದ್ದರೆ ನಿಮ್ಮ ನೆರೆ ಹೊರೆಯ ಕನ್ನಡೇತರರಿಗೆ ಕನ್ನಡ ಕಲಿಸಿ , ಕನ್ನಡೇತರರಿಗೆ ನಿಮ್ಮ ಊರಿನ ಬಗ್ಗೆ ಪರಿಚಯ ಮಾಡಿಸಿ.ಇದರಿಂದ ಕನ್ನಡಿಗರ ಬಗ್ಗೆ  ಕನ್ನಡೇತರರಿಗೆ ಅಭಿಮಾನವು ಬೆಳೆಯುತ್ತದೆ ಹಾಗು ಕನ್ನಡಿಗರು ಸುಸಂಕೃತರು ಎನ್ನುವ ಭಾವನೆಯು ಬಲಗೊಳ್ಳುತ್ತದೆ.

ಕನ್ನಡ ಸಾಹಿತ್ಯ , ಸಂಸ್ಕೃತಿಯನ್ನು ಅರಿಯಲು ಇತಿಹಾಸವನ್ನು ಓದುವುದು ಅವಶ್ಯಕ. ಒಮ್ಮೆಯಾದರೂ ಕನ್ನಡದ ಮೇಲ್ಮೆಯನ್ನು ಅರಿಯಲು ಯತ್ನಿಸಿ.
ಕನ್ನಡ ನಾಟಕಗಳನ್ನು ನೋಡಿ , ಅಭಿನಯಿಸಿ, ಪ್ರೋತ್ಸಾಹ ನೀಡಿ. ವರ್ಷಕ್ಕೆ ಒಮ್ಮೆಯಾದರು ಕೆಳದಿ, ಕಿತ್ತೂರು , ಬನವಾಸಿ, ಬೇಲೂರು , ಹಂಪಿ, ಬಿಜಾಪುರ ಮುಂತಾದ ಸ್ಥಳಗಳಿಗೆ ಸಂಸಾರ ಸಮೇತರಾಗಿ ಭೇಟಿ ನೀಡಿ ಅಲ್ಲಿನ ಇತಿಹಾಸವನ್ನು ನಿಮ್ಮ ಮನೆಯವರಿಗೆ ತಿಳಿಸಿ ಕೋಡಿ.fb_img_1477961052628


” ಕನ್ನಡ ಬರೆಯಲು ಚೆಂದ ” ಎಂದು ಕೃಷ್ಣ ದೇವರಾಯನು ಹೇಳಿದ್ದಾನೆ .ತುಂಬಾ ದಿನ ಆಯಿತು ಕನ್ನಡದಲ್ಲಿ ಬರೆದು ಎಂದು ಹೇಳುವ ಬದಲು ವಾರಕ್ಕೆ ಒಂದು ಪುಟದ ಮೇಲಾದರೂ ಲೇಖನಿಯಿಂದ ದಾಳಿ ಮಾಡಿ. ನಿಮ್ಮ ದಾಳಿಯ ಪರಿಣಾಮವನ್ನು ಅರಿತುಕೊಳ್ಳಿ. ನೀವೆಷ್ಟು ಕನ್ನಡಿಗರು ಎಂದು ಆಗ ಅರಿವಿಗೆ ಬರುತ್ತದೆ.

ಮಧುಚಂದ್ರ

Loading...
loading...
error: Content is protected !!