ಈಜಿಫ್ಟ್ ನಲ್ಲಿ ಉಗ್ರರ ಭಾರೀ ಸಂಚು ವಿಫಲಗೊಳಿಸಿದ ಭದ್ರತಾ ಪಡೆಗಳು, 10 ಉಗ್ರರ ಹತ್ಯೆ |News Mirchi

ಈಜಿಫ್ಟ್ ನಲ್ಲಿ ಉಗ್ರರ ಭಾರೀ ಸಂಚು ವಿಫಲಗೊಳಿಸಿದ ಭದ್ರತಾ ಪಡೆಗಳು, 10 ಉಗ್ರರ ಹತ್ಯೆ

ಈಜಿಪ್ಟ್ ನಲ್ಲಿ ಭದ್ರತಾ ಪಡೆಗಳು ಭಾರೀ ಉಗ್ರ ಸಂಚನ್ನು ಭಗ್ನಗೊಳಿಸಿವೆ. ಸೆಂಟ್ರಲ್ ಕೈರೋ ಜಿಲ್ಲೆಯ ಅರ್ದ್ ಎಲ್ಲೇವಾದಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಅಡಗಿದ್ದ 10 ಭಯೋತ್ಪಾದಕರನ್ನು ಭಾನುವಾರ ಭದ್ರತಾ ಪಡೆಗಳು ಕೊಂದಿವೆ. ಉಗ್ರರ ದಾಳಿಯಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ಐವರು ಭದ್ರತಾ ಪಡೆ ಸಿಬ್ಬಂದಿ ಗಾಯಗೊಂಡಿರುವುದಾಗ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪೊಲೀಸರ ವಿರುದ್ಧ ಸ್ಪೋಟಕವನ್ನು ಬಳಸಲು ಯತ್ನಿಸಿದಾಗ ಅದು ಮುಂಚಿತವಾಗಿಯೇ ಸ್ಪೋಟಗೊಂಡು ಉಗ್ರನೊಬ್ಬ ಸತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಉಗ್ರರು ದೇಶದಲ್ಲಿ ಹಲವು ಕಡೆ ದಾಳಿಗೆ ಯೋಜನೆ ರೂಪಿಸುತ್ತಿರುವುದಾಗಿ ಬಂದ ಗುಪ್ತಚರ ಮಾಹಿತಿ ಪಡೆದು ಉಗ್ರರ ವಿರುದ್ಧ ಕಾರ್ಯಚರಣೆ ನಡೆದಿತ್ತು. ಉಗ್ರರು ಅಡಗಿದ್ದ ಕಟ್ಟಡವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದರು. ಭದ್ರತಾ ಪಡೆಗಳ ಚಲನವಲನವನ್ನು ಗಮನಿಸಿದ ಉಗ್ರರು ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು. ಈ ವೇಳೆ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಸುಮಾರು 10 ಉಗ್ರರು ಸಾವನ್ನಪ್ಪಿದ್ದಾರೆ.

ಸತ್ತ ಉಗ್ರರೆಲ್ಲರೂ ನಿಷೇಧಿತ ಮುಸ್ಲಿಂ ಬ್ರದರ್ ಹುಡ್ ಸಂಸ್ಥೆಯಿಂದ ಬೇರ್ಪಟ್ಟವರೆಂದು ಹೇಳಲಾಗುತ್ತಿದೆ. ಘಟನಾ ಸ್ಥಳದಿಂದ ಭಾರೀ ಪ್ರಮಾಣದ ಆಯುಧಗಳು, ಮದ್ದುಗುಂಡುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. 2013 ರಲ್ಲಿ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಸರ್ಕಾರವನ್ನು ಸೇನೆ ರದ್ದುಗೊಳಿಸಿದ ನಂತರ ಈಜಿಪ್ಟ್ ನಲ್ಲಿ ಸೇನೆ ಮತ್ತು ಪೊಲೀಸರ ಮೇಲೆ ಉಗ್ರರ ದಾಳಿಗಳು ಹೆಚ್ಚಾಗಿವೆ.

English Summary:
Egyptian police on Sunday attacked two adjacent apartments used as hideouts by members of Muslim Brotherhood group and killed 10 of them in a shootout. The gunfire between police and terrorists occurred in Cairo district.

Loading...
loading...
error: Content is protected !!