ಎರಡೂ ಗುಂಪುಗಳಿಗಿಲ್ಲ ಎಐಎಡಿಎಂಕೆ ಚಿಹ್ನೆ ಮತ್ತು ಹೆಸರು |News Mirchi

ಎರಡೂ ಗುಂಪುಗಳಿಗಿಲ್ಲ ಎಐಎಡಿಎಂಕೆ ಚಿಹ್ನೆ ಮತ್ತು ಹೆಸರು

ತಮಿಳುನಾಡಿನಲ್ಲಿ ಜಯಲಲಿತಾ ನಿಧನದಿಂದ ತೆರವಾಗಿರುವ ಅರ್.ಕೆ.ನಗರ್ ವಿಧಾನಸಭೆಗೆ ನಡೆಯಲಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪಕ್ಷದ ಹೆಸರು ಮತ್ತು ಎರಡು ಎಲೆಗಳ ಚಿಹ್ನೆಯನ್ನು ತಮಗೇ ನೀಡಬೇಕು ಎಂಬ ಬೇಡಿಕೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಉಪಚುನಾವಣೆಯಲ್ಲಿ ಶಶಿಕಲಾ ಮತ್ತು ಪನ್ನೀರ್ ಸೆಲ್ವಂ ಗುಂಪುಗಳೆರಡಕ್ಕೂ ಎಐಎಡಿಎಂಕೆ ಪಕ್ಷದ ಚಿಹ್ನೆ ಮತ್ತು ಹೆಸರು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಎರಡೂ ಗುಂಪುಗಳಿಗೂ ಉಚಿತ ಚಿಹ್ನೆಗಳ ಪಟ್ಟಿಯಲ್ಲಿ ಅವರು ಇಚ್ಛಿಸುವ ಚಿಹ್ನೆಗಳನ್ನು ನೀಡಲಾಗುತ್ತದೆ ಎಂದು ಆಯೋಗ ಹೇಳಿದೆ.

Loading...
loading...
error: Content is protected !!