ಷರತ್ತುಗಳೊಂದಿಗೆ ಕೇಂದ್ರ ಬಡ್ಜೆಟ್ ಮಂಡಿಸಲು ಅನುಮತಿ |News Mirchi

ಷರತ್ತುಗಳೊಂದಿಗೆ ಕೇಂದ್ರ ಬಡ್ಜೆಟ್ ಮಂಡಿಸಲು ಅನುಮತಿ

ಫೆಬ್ರವರಿ 1ರಂದು ಕೇಂದ್ರ ಬಡ್ಜೆಟ್ ಮಂಡಿಸಲು ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಆದರೆ ಇದಕ್ಕೆ ಕೆಲವೊಂದು ಷರತ್ತುಗಳನ್ನು ಚುನಾವಣಾ ಆಯೋಗ ವಿಧಿಸಿದೆ. ಚುನಾವಣೆ ನಡೆಯಲಿರುವ 5 ರಾಜ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳನ್ನು ಪ್ರಕಟಿಸಬಾರದು ಮತ್ತು ಭರವಸೆಗಳನ್ನು ನೀಡಬಾರದು. ಈ ಐದೂ ರಾಜ್ಯಗಳ ಚುನಾವಣೆ ಕುರಿತಂತೆ ಅರ್ಥಿಕ ಸಚಿವರು ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಬಾರದು ಎಂಬ ಷರತ್ತುಗಳನ್ನು ಕೇಂದ್ರ ಸರ್ಕಾರಕ್ಕೆ ವಿಧಿಸಿದೆ.

2009 ರಲ್ಲಿ ಓಟಾನ್ ಅಕೌಂಟ್ ಮಂಡಿಸಿದ ವಿಷಯವನ್ನು ನೆನಪಿಸಿದ ಚುನಾವಣಾ ಆಯೋಗ, ಇದೇ ಮಾದರಿಯಲ್ಲಿ ಬಡ್ಜೆಟ್ ಮಂಡಿಸಬೇಕು ಎಂದು ಸೂಚಿಸಿದೆ. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಪ್ರಯತ್ನಗಳಿಗೆ ಕುಂದುಂಟಾಗದಂತೆ ಐದು ರಾಜ್ಯಗಳಲ್ಲಿನ ಮತದಾರರ ಮೇಲೆ ಪ್ರಭಾವ ಬೀರದೆ ಈ ಬಡ್ಜೆಟ್ ಮಂಡಿಸಬೇಕು ಎಂದು ಆದೇಶಿಸಿದೆ.

Loading...
loading...
error: Content is protected !!