ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ |News Mirchi

ಕಾಶ್ಮೀರದಲ್ಲಿ ಮೂವರು ಉಗ್ರರ ಹತ್ಯೆ

ಜಮ್ಮೂ ಕಾಶ್ಮೀರದಲ್ಲಿನ ಪುಲ್ವಾಮಾ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಭಾರತೀಯ ಸೈನಿಕರು ಹತ್ಯೆ ಮಾಡಿದ್ದಾರೆ. ಶ್ರೀನಗರಕ್ಕೆ 40 ಕಿ.ಮೀ ದೂರದ ಬಮ್ಹಾದಲ್ಲಿ ಉಗ್ರರಿರುವ ಸುಳಿವು ಪಡೆದ ಭದ್ರತಾಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯ ನಡೆಸಿದ್ದರು. ಈ ಸಂದರ್ಭದಲ್ಲಿ ಉಗ್ರರು ಸೇನೆಯ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಗಂಡಿನ ದಾಳಿಯಲ್ಲಿ ಮೂವರು ಹಿಜ್ಬುಲ್ ಮುಜಾಹಿದೀನ್ ಉಗ್ರರು ಹತರಾಗಿದ್ದಾರೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಉಗ್ರನಿಗಾಗಿ ಸೇನೆ ಶೋಧ ಕಾರ್ಯ ಮುಂದುವರೆಸಿದೆ.

ಸತ್ತ ಉಗ್ರರಲ್ಲಿ ಒಬ್ಬರನ್ನು ಕಿಫಾಯತ್ ಎಂದು ಸೇನೆ ಗುರುತಿಸಿದೆ. ಹತ್ತು ಗಂಟೆಗಳ ಕಾಲ ನಡೆದ ಈ ಕಾರ್ಯಚರಣೆಯಲ್ಲಿ ಅಂತಿಮವಾಗಿ ಉಗ್ರರನ್ನು ಕೊಲ್ಲಲಾಯಿತು.

ಒಬ್ಬ ಉಗ್ರನ ಹತ್ಯೆ, ಮೂವರು ಉಗ್ರರು ಪರಾರಿಯಾಗಲು ಸಹಕರಿಸಿದ ಕಲ್ಲಸೆಯುವವರು

ಅದಕ್ಕೂ ಮುನ್ನ ಭಾನುವಾರ ಸಂಜೆ ಪುಲ್ವಾಮಾ ಜಿಲ್ಲೆಯ ಮಲಂಗ್ಪೋರಾ ಗ್ರಾಮದಲ್ಲಿ ಸೇನೆ ಉಗ್ರರಿಗಾಗಿ ಶೋಧ ನಡೆಸುತ್ತಿದ್ದಾಗ ಗ್ರಾಮಸ್ಥರ ನೆರವಿನಿಂದ ಉಗ್ರರರು ಪರಾರಿಯಾಗಿದ್ದರು.

Loading...
loading...
error: Content is protected !!