ಜಯಚಂದ್ರನ ಆಸ್ತಿ ಮುಟ್ಟುಗೋಲು

ಬೆಂಗಳೂರು : ನೋಟು ಅನಾಣ್ಯೀಕರಣದ ನಂತರ ತೆರಿಗೆ ಅಧಿಕಾರಿಗಳಿಂದ ನಡೆದ ದಾಳಿಯ ನಂತರ ಬಂಧನಕ್ಕೊಳಗಾದ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಜಯಚಂದ್ರ ಅವರಿಗೆ ಸೇರಿದ 25 ಕೋಟಿ ಮೌಲ್ಯದ 17 ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಅಷ್ಟೇ ಅಲ್ಲದೆ ಇನ್ನೂ 50 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲು ಕೇಂದ್ರದ ಹಿರಿಯ ಅಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಈತನ ಆಸ್ತಿ ಸುಮಾರು 250 ಕೋಟಿಗೂ ಹೆಚ್ಚು ಎನ್ನಲಾಗುತ್ತಿದೆ.

ಕಾವೇರಿ ನಿಗಮದ ಎಂ.ಡಿ ಚಿಕ್ಕರಾಯಪ್ಪ ಮತ್ತು ರಾಜ್ಯದ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ಎಂಬ ಹಿರಿಯ ಅಧಿಕಾರಿಗಳ ನಿವಾಸಗಳ ಮೇಲೆ ನವೆಂಬರ್ 8 ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಕ್ರಮವಾಗಿ ಬದಲಾಯಿಸಿ ಇಟ್ಟಿದ್ದ ಹೊಸ 2 ಸಾವಿರ ನೋಟುಗಳು ಪತ್ತೆಯಾಗಿದ್ದವು. ನಂತರ ಜಾರಿ ನಿರ್ದೇನಾಲಯ ಜಯಚಂದ್ರ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿತ್ತು.