ಯುವತಿಯ ಕಾರು ಬೆನ್ನಟ್ಟಿದ ಪ್ರಕರಣ: ಕೊನೆಗೂ ಬಿಜೆಪಿ ಮುಖಂಡನ ಪುತ್ರನ ಬಂಧನ – News Mirchi

ಯುವತಿಯ ಕಾರು ಬೆನ್ನಟ್ಟಿದ ಪ್ರಕರಣ: ಕೊನೆಗೂ ಬಿಜೆಪಿ ಮುಖಂಡನ ಪುತ್ರನ ಬಂಧನ

ಕೊನೆಗೂ ಯುವತಿಯೊಬ್ಬರ ಕಾರನ್ನು ಬೆನ್ನಟ್ಟಿ ಕಿರುಕುಳ ನೀಡಿದ ಪ್ರಕರಣದಲ್ಲಿ ಹರಿಯಾಣ ಬಿಜೆಪಿ ಮುಖಂಡ ಸುಭಾಶ್ ಬರಾಲಾ ಪುತ್ರ ವಿಕಾಸ್ ಬರಾಲಾನನ್ನು ಪೊಲೀಸರು ಬಂಧಿಸಿದ್ದಾರೆ. ಚಂಡೀಗಢದ ಸೆಕ್ಟಾರ್ 26 ಪೊಲೀಸ್ ಠಾಣೆಯಲ್ಲಿ ಆತನನ್ನು ಬಿಗಿಭದ್ರತೆಯ ನಡುವೆ ಬಂಧಿಸಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಆತ ಠಾಣೆಗೆ ಹಾಜರಾಗಬೇಕೆಂದು ಸಮನ್ಸ್ ನೀಡಿದ್ದರೂ ಸುಮಾರು ಮೂರು ಗಂಟೆಗಳು ತಡವಾಗಿ ಆಗಿಮಿಸಿದ್ದರು. ಹೀಗಾಗಿ ಪೊಲೀಸರು ಆತನನ್ನು ಬಂಧಿಸಿದರು.

ನನ್ನ ತೇಜೋವಧೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ: ವರ್ಣಿಕಾ ಕುಂದು

ವಿಕಾಸ್ ಪೊಲೀಸ್ ಠಾಣೆಗೆ ಆಗಮಿಸುವ ಮುನ್ನವೇ ಮಾಧ್ಯಮಗಳೊಂದಿಗೆ ಮಾತನಾಡಿದ ಆತನ ತಂದೆ ಸುಭಾಷ್ ಬರಾಲಾ, ತಮ್ಮ ಪುತ್ರ ವಿಚಾರಣೆಗೆ ಹಾಜರಾಗಲು ಸೂಚಿಸಿರುವುದಾಗಿ ಹೇಳಿದ್ದರು. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು, ಅದು ತನ್ನ ಪುತ್ರನಾದರೂ ಸರಿ, ಯಾರಾದರೂ ಸರಿ. ಆ ಹೆಣ್ಣು ಮಗಳು ನನ್ನ ಮಗಳಿದ್ದಂತೆ. ವಿಚಾರಣೆಗೆ ಹಾಜರಾಗುವಂತೆ ಮಗನಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ ಎಂದು ಹೇಳಿದರು. ಮತ್ತೊಂದು ಕಡೆ ವಿಕಾಸ್ ತಪ್ಪು ಮಾಡಿರುವುದಕ್ಕೆ ಸ್ಪಷ್ಟ ಸಾಕ್ಷಿಗಳಿವೆ, ಹೀಗಾಗಿ ಆತನನ್ನು ಬಂಧಿಸಲು ಈ ಸಾಕ್ಷಿಗಳು ಸಾಕಾಗುತ್ತವೆ ಎಂದು ಪೊಲಿಸರು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಯುವತಿಯ ಕ್ಷಮೆಯಾಚಿಸಲು ವಿಕಾಸ್ ಸಿದ್ಧವಾಗಿದ್ದಾರಂತೆ. ಆ ದಿನ ಉದ್ದೇಶಪೂರ್ವಕವಾಗಿ ಆಕೆಯ ಕಾರನ್ನು ಬೆನ್ನಟ್ಟಲಿಲ್ಲ. ಕಾರು ಚಾಲನೆ ಮಾಡುತ್ತಿದ್ದುದು ಮಹಿಳೆಯಾ, ಪುರುಷನಾ ಎಂದು ತಿಳಿಯಲು ಪಂದ್ಯ ಕಟ್ಟಿದ್ದೇ ಕಾರನ್ನು ಹಿಂಬಾಲಿಸಲು ಕಾರಣ ಎಂದು ವಿಕಾಸ್ ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ. ವಿಕಾಸ್ ಬರಾಲಾ ಮತ್ತು ಆತನ ಸ್ನೇಹಿತ ಆಶೀಷ್ ಕುಮಾರ್ ಒಬ್ಬ ಐಎಎಸ್ ಅಧಿಕಾರಿ ಪುತ್ರಿ ವರ್ಣಿಕಾ ಕುಂದು ಎಂಬುವವರ ಕಾರನ್ನು ಬೆನ್ನಟ್ಟಿ ಕಿರುಕುಳ ನೀಡಿದ್ದರು.

Loading...