ಆ ಕ್ಷಣವೇ ನಾನು ರಾಜಕೀಯದಿಂದ ದೂರ ಸರಿಯುತ್ತೇನೆ – News Mirchi

ಆ ಕ್ಷಣವೇ ನಾನು ರಾಜಕೀಯದಿಂದ ದೂರ ಸರಿಯುತ್ತೇನೆ

ಪಣಜಿ: ನನ್ನದು ರಾಜಕೀಯ ಹಿನ್ನೆಲೆಯ ಕುಟುಂಬವಲ್ಲ, ನನ್ನ ಕನಸೂ ಅದಾಗಿರಲಿಲ್ಲ ಎಂದು ಹೇಳಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ರಾಜಕೀಯದಲ್ಲಿ ಉಳಿಯಲು ಅನರ್ಹ ಎಂದೆನಿಸಿದ ಮರುಕ್ಷಣವೇ ರಾಜಕೀಯ ತೊರೆಯುವುದಾಗಿ ಹೇಳಿದ್ದಾರೆ.

ರಾಜಕೀಯಕ್ಕೆ ಬರುತ್ತೇನೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಬಂದ ನಂತರ 10 ವರ್ಷಗಳಲ್ಲಿ ರಾಜಕೀಯಕ್ಕೆ ಗುಡ್ ಬೈ ಹೇಳಬೇಕೆಂದು ನಿರ್ಧರಿಸಿದ್ದೆ. ಐಐಟಿ ಪದವೀಧರನಾದ ನಾನು ತನಗಿಷ್ಟವಿಲ್ಲದಿದ್ದರೂ ರಾಜಕೀಯ ಜೀವನಕ್ಕೆ ಕಾಲಿರಿಸಬೇಕಾಯಿತು ಎಂದು ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಈ ಹಿಂದೆ ಕೇಂದ್ರದ ಸೂಚನೆಯಂತೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಕೇಂದ್ರದಲ್ಲಿ ರಕ್ಷಣಾ ಸಚಿವನಾದೆ. ಅಲ್ಲಿ ನನ್ನ ಅವಶ್ಯಕತೆ ಇದೆ ಎನಿಸಿದ್ದರಿಂದ ಹಾಗೆ ಮಾಡಬೇಕಾಯಿತು. ಆದರೆ ಗೋವಾ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಮತ್ತೆ ನಿಮಗಾಗಿ ಹಿಂತಿರುಗಿದ್ದೇನೆ. ಸರ್ಕಾರ ಪೂರ್ಣ ಅವಧಿಯನ್ನು ಪೂರೈಸುತ್ತದೆ ಎಂದರು. ಏನೇ ಸಮಸ್ಯೆ ಬಂದರೂ ಎದುರಿಸಿ ನಿಲ್ಲುತ್ತೇನೆ. ಈ ಬಾರಿ ಏನೇ ಆದರೂ ಅರ್ಧ ದಾರಿಯಲ್ಲಿ ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Contact for any Electrical Works across Bengaluru

Loading...
error: Content is protected !!