ನೆಪಮಾತ್ರಕ್ಕೆ ರೂಪಾ ವರ್ಗಾವಣೆ ಜೊತೆಗೆ ಮತ್ತಷ್ಟು ಅಧಿಕಾರಿಗಳ ಹೆಸರು – News Mirchi

ನೆಪಮಾತ್ರಕ್ಕೆ ರೂಪಾ ವರ್ಗಾವಣೆ ಜೊತೆಗೆ ಮತ್ತಷ್ಟು ಅಧಿಕಾರಿಗಳ ಹೆಸರು

ಡಿಐಜಿ ರೂಪಾ ಅವರನ್ನು ಕಾರಾಗೃಹ ವಿಭಾಗದಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ತೀವ್ರ ವಿರೋಧಗಳು ಕೇಳಿಬರುತ್ತಿವೆ. ಡಿಐಜಿ ರೂಪಾ ಅವರು ಕಾರಾಗೃಹದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳಿದ ಕಾರಣಕ್ಕೇ ಸರ್ಕಾರ ಅವರನ್ನು ವರ್ಗಾವಣೆ ಮಾಡಿದ್ದು, ನೆಪ ಮಾತ್ರಕ್ಕೆ ಅವರ ಜೊತೆ ಇನ್ನೊಂದಷ್ಟು ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ಹೇಳಿದ್ದಾರೆ.

ಮುಖ್ಯಮಂತ್ರಿಗಳೇ ಈಗ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಕರ್ನಾಟಕದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಕೊಡೋ ಉದ್ದೇಶವೇ ಸರ್ಕಾರಕ್ಕಿಲ್ಲ. ಭ್ರಷ್ಟರನ್ನು ಬಯಲಿಗೆಳೆಯುವಂತಹ ಅಧಿಕಾರಿಗಳ ಬಗ್ಗೆ ಕಾಂಗ್ರೆಸ್ ಗೆ ಆಸಕ್ತಿ ಇಲ್ಲ, ಭ್ರಷ್ಟರಿಗೆ ಮಾತ್ರ ರಾಜ್ಯ ಸರ್ಕಾರ ಹಿಂದಿನಿಂದಲೂ ಬೆಂಬಲ ನೀಡುತ್ತಾ ಬಂದಿದೆ, ಇದಕ್ಕೆ ಹಲವಾರು ಉದಾಹರಣೆಗಳನ್ನು ನಾನು ನೀಡಬಲ್ಲೆ ಎಂದು ಈಶ್ವರಪ್ಪ ಹೇಳಿದ್ದಾರೆ.

ರಾಷ್ಟ್ರಪತಿ ಆಯ್ಕೆ ನಡೆಯೋದು ಹೀಗೆ

ಇಡೀ ರಾಜ್ಯದ ಜನತೆ ನಿಮ್ಮನ್ನು ಗಮನಿಸುತ್ತಿದ್ದಾರೆ, ಸರ್ಕಾರದಿಂದ ತಪ್ಪು ನಡೆದಿದೆ. ಕೂಡಲೇ ರೂಪಾ ಅವರ ವರ್ಗಾವಣೆಯನ್ನು ರದ್ದು ಮಾಡಿ ತಪ್ಪು ತಿದ್ದುಕೊಳ್ಳಲಿ ಎಂದು ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲ. ಕಾರಾಗೃಹದಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾ ಅವರಿಗೆ ಸರ್ಕಾರ ನೀಡಿದ ಬೆಲೆ ಇದು ಎಂದು ಕಿಡಿ ಕಾರಿದ್ದಾರೆ.

ಭ್ರಷ್ಟಾಚಾರ ವಿರುದ್ಧ ಧ್ವನಿಯೆತ್ತಿದ್ದ ರೂಪಾಗೆ ಎತ್ತಂಗಡಿ ಶಿಕ್ಷೆ!

Click for More Interesting News

Loading...
error: Content is protected !!