ಕೊನೆಗೂ ಸೆರೆ ಸಿಕ್ಕ ನ್ಯಾಯಾಧೀಶ ಕರ್ಣನ್ – News Mirchi

ಕೊನೆಗೂ ಸೆರೆ ಸಿಕ್ಕ ನ್ಯಾಯಾಧೀಶ ಕರ್ಣನ್

ಹಲವು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದ ಜಸ್ಟೀಸ್ ಕರ್ಣನ್ ಕೊನೆಗೂ ಪೊಲೀಸರಿಗೆ ಸಿಕ್ಕಿದ್ದಾರೆ. ಮಂಗಳವಾರ ಅವರನ್ನು ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಕರ್ಣನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕರ್ಣನ್ ಪರ ವಕೀಲರು ತಿಳಿಸಿದ್ದಾರೆ. ಬಂಧನ ಭೀತಿಯನ್ನು ಎದುರಿಸುತ್ತಾ ಅಜ್ಞಾತ ಸ್ಥಳದಲ್ಲಿದ್ದು ನಿವೃತ್ತರಾದ ಪ್ರಥಮ ನ್ಯಾಯಾಧೀಶರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ನ್ಯಾಯಾಲಯ ನಿಂದನೆ ಅಪರಾಧಕ್ಕೆ ಸುಪ್ರೀಂ ಕೋರ್ಟ್ ವಿಧಿಸಿದ 6 ತಿಂಗಳೂ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಬಚಾವಾಗಲು ಇಷ್ಟು ದಿನ ಕರ್ಣನ್ ತಲೆ ಮರೆಸಿಕೊಂಡಿದ್ದರು. ಮೇ 9 ರಂದು ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಖೇಹರ್ ನೇತೃತ್ವದ ನ್ಯಾಯಪೀಠ ಕರ್ಣನ್ ಅವರನ್ನು ಬಂಧಿಸಬೇಕೆಂದು ಆದೇಶಿಸಿತ್ತು.

ಜೈಲು ಶಿಕ್ಷೆಯಿಂದ ತಡೆ ಕೋರಿ ಸುಪ್ರೀಂ ರಜಾಕಾಲದ ಪೀಠಕ್ಕೆ ಹಲವು ಬಾರಿ ಕರ್ಣನ್ ಮನವಿ ಮಾಡಿದರೂ ಪರಿಹಾರ ಸಿಕ್ಕಿರಲಿಲ್ಲ. ಕೋರ್ಟ್ ನಿಂದನೆಗೆ ತಮ್ಮನ್ನು ಶಿಕ್ಷಿಸುವುದು ಸಾಧ್ಯವಿಲ್ಲ, ತೀರ್ಪನ್ನು ರದ್ದುಗೊಳಿಸಬೇಕು, ಮುಂದಿನ ವಿಚಾರಣೆಗೆ ತಡೆ ನೀಡಬೇಕು ಎಂದು ಮೇ 12 ರಂದು ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದ್ದರು. ಸುಪ್ರೀಂ ತೀರ್ಪಿನ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕರ್ಣನ್ ಪರ ವಕೀಲರು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಮೊರೆ ಹೋದರು ಪ್ರಯೋಜನವಾಗಿರಲಿಲ್ಲ.

Loading...