13 ಲಕ್ಷ ಮೌಲ್ಯದ ಹಳೆ ನೋಟು ಅಬಕಾರಿ ಅಧಿಕಾರಿಗಳ ವಶ

ಕಾಸರಗೋಡು: ಅಮಾನ್ಯಗೊಂಡ ನೋಟುಗಳ ರೂ. 13 ಲಕ್ಷ ಮೌಲ್ಯದ ಹಣವನ್ನು ಹೊಂದಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿ ಹಣ ವಶಪಡಿಸಿಕೊಂಡಿದ್ದಾರೆ.

ಧನರಾಜ್(40) ಎಂಬ ವ್ಯಕ್ತಿ ಹಣವನ್ನು ಬಸ್ಸಿನ ಮೂಲಕ ಕಣ್ಣೂರಿಗೆ ಸಾಗಿಸುತ್ತಿದ್ದರು. ಎಂದಿನಂತೆ ಮಂಜೇಶ್ವರ್ ಬಳಿ ಸಾಮಾನ್ಯ ತನಿಖೆ ನಡೆಸುತ್ತಿದ್ದಾಗ ಈ ಹಣ ಪತ್ತೆಯಾಗಿದ್ದು, ಧನರಾಜ್ ನನ್ನು ಪೊಲೀಸರು ಬಂಧಿಸಿದರು. ಚಿನ್ನದ ವ್ಯಾಪಾರ ಸಂಬಂಧ ಮುಂಬಯಿಯಿಂದ ಕಣ್ಣೂರಿಗೆ ಹಣ ಹೊತ್ತೊಯ್ಯುತ್ತಿದ್ದಾಗಿ ಧನರಾಜ್ ಹೇಳಿದ್ದಾರೆ.