ಚುನಾವಣೋತ್ತರ ಸಮೀಕ್ಷೆ ಬಿಡುಗಡೆ: ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಕಹಿ ಸುದ್ದಿ? |News Mirchi

ಚುನಾವಣೋತ್ತರ ಸಮೀಕ್ಷೆ ಬಿಡುಗಡೆ: ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಕಹಿ ಸುದ್ದಿ?

ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣೆಯ ಎಗ್ಸಿಟ್ ಪೋಲ್ ಹೊರಬಿದ್ದಿದೆ. ಟೈಮ್ಸ್ ನೌ – ವಿಎಂಆರ್ ಚುನಾವಣೋತ್ತರ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 113 ಸ್ಥಾನ ಗಳಿಸುತ್ತದೆ ಎಂದು ಹೇಳಿದ್ದು, ಕಾಂಗ್ರೆಸ್ 66 ಸ್ಥಾನಗಳಷ್ಟೇ ಗೆಲ್ಲಲಿದೆ ಎಂದು ಹೇಳಿದೆ. ಇನ್ನು ಮೂರು ಸ್ಥಾನಗಳು ಇತರರ ಪಾಲಾಗಲಿವೆ ಎಂದು ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 68 ಸ್ಥಾನಗಳಲ್ಲಿ 51 ಸ್ಥಾನಗಳಲ್ಲಿ ಗೆಲುವ ಸಾಧಿಸಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಇನ್ನು ಕಾಂಗ್ರೆಸ್ 17 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದ್ದು, ಇತರರಿಗೆ ಒಂದು ಸ್ಥಾನ ಸಿಗಲಿದೆ. 2012 ಕ್ಕೆ ಹೋಲಿಸಿದರೆ ಇಲ್ಲಿ ಬಿಜೆಪಿ 25 ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ.

ಎರಡೂ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಫಲಿತಾಂಶಗಳು ಇತ್ತೀಚೆಗಷ್ಟೇ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್ ಗಾಂಧಿಗೆ ಕಹಿ ಸುದ್ದಿಯಾಗಲಿದೆ. ಗುಜರಾತ್ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ ರಾಹುಲ್ ಗಾಂಧಿ, ಮೀಸಲಾತಿಗಾಗಿ ಹೋರಾಡುತ್ತಿದ್ದ ಪಟೀದಾರ್ ಅನಾಮತ್ ಆಂದೋಲನ್ ಸಮಿತಿಯ ಹಾರ್ಧಿಕ್ ಪಟೇಲ್ ಜೊತೆ ಕೈಜೋಡಿಸಿದ್ದಾರೆ. ಪ್ರಚಾರದ ಭಾಗವಾಗಿ ಹಿಂದೆಂದೂ ಮಾಡದ ದೇವಸ್ಥಾನಗಳ ದರ್ಶನ ಮಾಡಿದರು.

ಉಲ್ಟಾ ಹೊಡೆದ ಗ್ರೀನ್ ಟ್ರಿಬ್ಯುನಲ್, ಧಾರ್ಮಿಕ ಆಚರಣೆಗಳಿಗಿಲ್ಲವಂತೆ ನಿಷೇಧ

ಏನೆಲ್ಲಾ ಸರ್ಕಸ್ ಮಾಡಿದರೂ ಗುಜರಾತ್ ನ ಮತದಾರರು ಕಾಂಗ್ರೆಸ್ ಅನ್ನು ಮತ್ತೊಮ್ಮೆ ತಿರಸ್ಕರಿಸಿದಂತೆ ಕಾಣುತ್ತಿದೆ. 20 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೇ ಮತ್ತೊಂದು ಅವಕಾಶ ನೀಡುವಂತೆ ಗೋಚರಿಸುತ್ತಿದೆ.

ಇನ್ನು ಭ್ರಷ್ಟಾಚಾರ ಮತ್ತು ಮನಿ ಲಾಂಡರಿಂಗ್ ಆರೋಪಗಳನ್ನು ಹೊತ್ತಿರುವ ವೀರಭದ್ರ ಸಿಂಗ್ ಅವರ ಆಡಳಿತದಿಂದ ಬೇಸತ್ತಿರುವ ಜನ ಈ ಬಾರಿ ಬಿಜೆಪಿ ಕೈಹಿಡಿಯಲು ನಿರ್ಧರಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಅಂತಿಮ ಮತ್ತು ಅಧಿಕೃತ ಫಲಿತಾಂಶಗಳನ್ನು ತಿಳಿದುಕೊಳ್ಳಲು ಸೋಮವಾರದವರೆಗೂ ಕಾದು ನೋಡಬೇಕಿದೆ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!