ರೈಲಿನಲ್ಲಿ ಬಾಂಬ್ ಪತ್ತೆ, ಉಗ್ರ ದುಜಾನಾ ಹತ್ಯೆಗೆ ಪ್ರತೀಕಾರದ ಬೆದರಿಕೆ – News Mirchi

ರೈಲಿನಲ್ಲಿ ಬಾಂಬ್ ಪತ್ತೆ, ಉಗ್ರ ದುಜಾನಾ ಹತ್ಯೆಗೆ ಪ್ರತೀಕಾರದ ಬೆದರಿಕೆ

ಹೌರಾದಿಂದ ಅಮೃತಸರಕ್ಕೆ ಹೊರಟಿದ್ದ ರೈಲಿನಲ್ಲಿ ಕಡಿಮೆ ತೀವ್ರತೆಯ ಬಾಂಬ್ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಗುರುವಾರ ಬೆಳಗ್ಗೆ 1:14 ರಲ್ಲಿ ರೈಲನ್ನು ನಿಲ್ಲಿಸಿ ಬಾಂಬ್ ನಿಷ್ಕ್ರಿಯಗೊಳಿಸಲಾಯಿತು. ಬಾಂಬ್ ಜೊತೆಗೆ ಎಚ್ಚರಿಕೆ ಪತ್ರವೊಂದು ಲಭಿಸಿದೆ.

ರೈಲಿನ ಬಿ3 ಬೋಗಿಯಲ್ಲಿನ ಟಾಯ್ಲೆಟ್ಟಿನಲ್ಲಿ ಅನುಮಾನಾಸ್ಪದ ವಸ್ತುವಿರುವ ಮಾಹಿತಿ ಪಡೆದ ಟಿಕೆಟ್ ಪರೀಕ್ಷ ಮತ್ತು ಭದ್ರತಾ ಸಿಬ್ಬಂದಿ ರೈಲನ್ನು ಅಕ್ಬರ್ ಗಂಜ್ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದರು. ಅಲ್ಲಿನ ರೈಲ್ವೇ ಪೊಲೀಸರು ಪರಿಶೀಲಿಸಿದ ನಂತರ ಬಾಂಬ್ ನಿಷ್ಕ್ರಿಯ ತಂಡವೂ ಸ್ಥಳಕ್ಕೆ ಧಾವಿಸಿ ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿತು.

ಬಾಂಬ್ ಜೊತೆಗೆ ಪತ್ರವೂ ದೊರೆತ್ತಿದ್ದು ಇತ್ತೀಚೆಗೆ ಉಗ್ರ ದುಜಾನಾ ಹತ್ಯೆಗೆ ಭಾರತ ಬೆಲೆ ತೆರಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ಆಗಸ್ಟ್ 1 ರಂದು ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘನೆಯ ಕಮಾಂಡರ್ ಅಬು ದುಜಾನಾನನ್ನು ಎನ್ಕೌಂಟರಿನಲ್ಲಿ ಭದ್ರತಾ ಪಡೆಗಳು ಕೊಂದಿದ್ದವು. 12 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಹತನಾದ ಉಗ್ರ ದುಜಾನಾ ಒಬ್ಬನಾಗಿದ್ದ [ಹತನಾದ ಉಗ್ರ ದುಜಾನಾ ಮತ್ತು ಸೇನಾಧಿಕಾರಿ ನಡುವಿನ ಸಂಭಾಷಣೆ] ಅವನ ತಲೆಗೆ 15 ಲಕ್ಷ ಬಹುಮಾನ ಘೋಷಿಸಲಾಗಿತ್ತು.

 

Loading...