ಲೆನೊವೊದಿಂದ ಫ್ಯಾಬ್ ಪ್ಲಸ್ ಫೋನ್

ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕಂಪನಿ ಲೆನೊವೊ 4050 mAh ಬ್ಯಾಟರಿ ಸಾಮರ್ಥ್ಯವುಳ್ಳ ಮತ್ತೊಂದು ಹೊಸ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಫ್ಯಾಬ್ ಪ್ಲಸ್ ಹೆಸರಿನಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್ ಫೋನನ್ನು ಅಮೆಜಾನ್ ನಲ್ಲಿ ತನ್ನ ಗ್ರಾಹಕರಿಗೆ ಬಿಡುಗಡೆ ಮಾಡಿದ್ದಾಗಿ ಸಂಸ್ಥೆ ಹೇಳಿದೆ.

ಫ್ಯಾಬ್ ಪ್ಲಸ್ ಬೆಲೆ ರೂ. 14,999 ಆಗಿದ್ದು, ಇದು 6.4 ಇಂಚು ಟಚ್ ಸ್ಕ್ರೀನ್, ಆಂಡ್ರಾಯ್ಡ್ 6.0 ಮಾರ್ಷ್ಮಾಲೋ, 3 ಜಿಬಿ ರ‌್ಯಾಮ್, 32 ಜಿಬಿ ಇಂಟರ್ನಲ್ ಮೆಮೊರಿ, 13 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾಗಳು, 8 ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸಾರ್ ಸೌಲಭ್ಯಗಳಿವೆ.