ಫೇಸ್ಬುಕ್ ಹೊಸ ಮೈಲಿಗಲ್ಲು, ಮಾಸಿಕ 200 ಕೋಟಿ ಸಕ್ರಿಯ ಬಳಕೆದಾರರು – News Mirchi

ಫೇಸ್ಬುಕ್ ಹೊಸ ಮೈಲಿಗಲ್ಲು, ಮಾಸಿಕ 200 ಕೋಟಿ ಸಕ್ರಿಯ ಬಳಕೆದಾರರು

ತಿಂಗಳಿಗೆ 200 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದುವ ಮೂಲಕ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಹೊಸ ಮೈಲಿಗಲ್ಲು ತಲುಪಿದೆ. 2012 ಅಕ್ಟೋಬರ್ ನಲ್ಲಿ 100 ಕೋಟಿಯಷ್ಟಿದ್ದ ಸಕ್ರಿಯ ಫೇಸ್ಬುಕ್ ಬಳಕೆದಾರರು, ಕೇವಲ 5 ವರ್ಷಗಳ ಅವಧಿಯಲ್ಲಿ ದ್ವಿಗುಣಗೊಂಡು 200 ಕೋಟಿ ತಲುಪಿದ್ದಾರೆ.

ನಿಮ್ಮೊಂದಿಗೆ ಸೇರಿ ಪಯಣಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಹೇಳಿದ್ದಾರೆ. ಫೇಸ್ಬುಕ್ ನ ಈ ಸಾಧನೆಯಲ್ಲಿ ವಾಟ್ಸಾಪ್ ಬಳಕೆದಾರರು ಮತ್ತು ಇನ್ಸ್’ಟಾಗ್ರಾಮ್ ಬಳಕೆದಾರರನ್ನು ಸೇರಿಸಿಲ್ಲ ಎಂದು ಅವರು ಹೇಳಿದ್ದಾರೆ. ಪ್ರತಿ ದಿನ 17.5 ಕೋಟಿ ಜನ ಲವ್ ರಿಯಾಕ್ಷನ್ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಫೇಸ್ಬುಕ್ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ. ಪ್ರತಿ ತಿಂಗಳು ಫೇಸ್ಬುಕ್ ಗ್ರೂಪ್ ಗಳನ್ನು 100 ಕೋಟಿಯಷ್ಟು ಜನ ಬಳಸುತ್ತಿದ್ದಾರಂತೆ.

Contact for any Electrical Works across Bengaluru

Loading...
error: Content is protected !!